Author: Jagali Katte
ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ನಾಯಕನಾಗಿ ನಟಿಸಿರುವ, ವಿಜಯಾನಂದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ `ಸೂಪರ್ ಹಿಟ್’. ತನ್ನ ಆಂತರ್ಯದ ಕಸುವಿನ ಸುಳಿವಿನಿಂದಲೇ ಪ್ರೇಕ್ಷಕರ ನಡುವೆ ಚರ್ಚೆ ಹುಟ್ಟು ಹಾಕಿದ್ದ ಈ ಸಿನಿಮಾಕ್ಕೀಗ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನ ಜನಪ್ರಿಯತೆಯೂ ಕೂಡಾ ಮತ್ತಷ್ಟು ಶಕ್ತಿ ತುಂಬಿದೆ. ಇದೇ ಹಂತದಲ್ಲಿ ಅಚ್ಚುಕಟ್ಟಾದ ಪತ್ರಿಕಾಗೋಷ್ಠಿಯಲ್ಲಿ, ಟೀಸರ್ ಒಂದರ ಮೂಲಕ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ವೇದಿಕೆಯಲ್ಲಿ ನಿರ್ದೇಶಕ ವಿಜಯಾನಂದ್, ನಿರ್ಮಾಪಕ ಜಿ ಉಮೇಶ್, ಸಾಧು ಕೋಕಿಲಾ, ಗೀತರಚನೆಕಾರ ಡಾ.ವಿ ನಾಗೇಂದ್ರ ಪ್ರಸಾದ್, ಗೌರವ್ ಶೆಟ್ಟಿ, ಶ್ವೇತಾ ಮುಂತಾದವರು ಸಿನಿಮಾ ಬಗ್ಗೆ ಭರವಸೆಯ ಮಾತಾಡುತ್ತಲೇ, ಒಂದಷ್ಟು ಮಹತ್ವದ ಅಂಶಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರ ಇದೇ ಫೆಬ್ರವರಿ 27ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ವಿ. ನಾಗೇಂದ್ರ ಪ್ರಸಾದ್ ಅವರ ಸಹೋದರರಾದ ವಿಜಯಾನಂದ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸೂಪರ್ ಹಿಟ್ ಬಿಡುಗಡೆ ದಿನಾಂಕ ಜಾಹೀರು ಮಾಡಿ ಮಾತಾಡಿದ ಅವರು, ಕಥೆ ಸಿದ್ಧವಾದ ಬಗೆಯಿಂದ ಮೊದಲ್ಗೊಂಡು…
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ `ವೀರ ಕಂಬಳ’ ಚಿತ್ರ ಇದೇ ಫೆಬ್ರವರಿ 27ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಬಿಡುಗಡೆಯ ಕ್ಷಣಗಳು ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ ವೀರ ಕಂಬಳದ ಒಡಲಿನಲ್ಲಿರುವ ಒಂದೊಂದೇ ವೈಶಿಷ್ಟ್ಯಗಳನ್ನು ಚಿತ್ರತಂಡ ಜಾಹೀರು ಮಾಡುತ್ತಿದೆ. ವೀರ ಕಂಬಳ ರೂಪುಗೊಂಡಿದ್ದರ ಹಿಂದೆ ದಶಕಗಳಷ್ಟು ಸುದೀರ್ಘವಾದ ಕಥನವಿದೆ. ಸರಿಸುಮಾರು ಏಳುನೂರು ವರ್ಷಗಳಷ್ಟು ಐತಿಹ್ಯವಿರುವ ಕಂಬಳದ ಬಗ್ಗೆ ಇಂಚಿಂಚು ಮಾಹಿತಿಯನ್ನು ಕಲೆಹಾಕುವ ಮೂಲಕ ರಾಜೇಂದ್ರ ಸಿಂಗ್ ಬಾಬು ಅವರು ಈ ಸಿನಿಮಾವನ್ನು ರೂಪಿಸಿದ್ದಾರೆ. ಇದರಲ್ಲಿನ ಅತ್ಯಂತ ಮಹತ್ವದ ಪಾತ್ರವೊಂದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಣ್ಣ ಹಚ್ಚಿರೋದು ವಿಶೇಷ. ವೀರೇಂದ್ರ ಹೆಗ್ಗಡೆ ಈ ಚಿತ್ರದಲ್ಲಿ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆಂಬ ವಿಚಾರ ವರ್ಷಗಳ ಹಿಂದೆಯೇ ಹೊರ ಬಂದಿತ್ತು. ಆದರೆ, ನಿರ್ದೇಶಕರಾಗಲಿ, ಚಿತ್ರತಂಡದವರಾಗಲಿ ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಬಿಟ್ಟು ಕೊಡದೆ ಗೌಪ್ಯತೆ ಕಾಪಾಡಿಕೊಂಡಿದ್ದರು. ಆದರೀಗ ವೀರೇಂದ್ರ ಹೆಗ್ಗಡೆ ನಿರ್ವಹಿಸಿರೋ ಪಾತ್ರದ ಚಹರೆಗಳನ್ನು ನಿರ್ದೇಶಕರೇ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಜೊತೆಗೆ, ಸದರಿ ಪಾತ್ರಕ್ಕೆ ಅವರನ್ನೇ ಆಯ್ಕೆ ಮಾಡಿಕೊಂಡಿದ್ದರ…
ಇಲ್ಲಿ ಹಸಿದ ಹೊಟ್ಟೆಗಿಂತ, ಹಳೇ ಹಗೆಯ ಉರಿನೇ ಜಾಸ್ತಿ! ಜಮೀನ್ದಾರಿ ಸಿಸ್ಟಮ್‌ಗೆ ಇವನೇ ಬಾಸ್.. ಆದ್ರೆ ಆ ಸಿಸ್ಟಮ್ ಅನ್ನೇ ನಡುಗಿಸೋಕೆ ಬರ್ತಿದ್ದಾನೆ ಒಬ್ಬ ಮಾಸ್! ದುನಿಯಾ ವಿಜಯ್ ಅಬ್ಬರಕ್ಕೆ, ರಾಜ್ ಬಿ. ಶೆಟ್ಟಿ ಸ್ವಾಗ್ ಸೇರಿದ್ರೆ ಹೇಗಿರುತ್ತೆ? ದಟ್ ಈಸ್ ‘ಲ್ಯಾಂಡ್ ಲಾರ್ಡ್’! ಹಾಗಾದ್ರೆ ಹೇಗಿದೆ ಲ್ಯಾಂಡ್ ಲಾರ್ಡ್ ಸಿನಿಮಾ? ಇದರ ಪ್ಲಸ್ ಏನು ಮೈನಸ್ ಏನು? ಜಡೇಶ್ ಹೆಣೆದ ಕಥೆ ವರ್ಕೌಟ್ ಆಯ್ತಾ? ಇದಲ್ಲದೆ ಸಿನಿಮಾದ ಔಟ್ ಅಂಡ್ ಔಟ್ ರಿವ್ಯೂವ್ ಇಲ್ಲಿದೆ. ಏನಿದು ಲ್ಯಾಂಡ್ ಲಾರ್ಡ್ ಕಥೆ ಅನ್ನೋದನ್ನ ಮೊದಲು ನೋಡೋಣ. ಲ್ಯಾಂಡ್ ಲಾರ್ಡ್ ಕಥೆ ಓಪನ್ ಆಗೋದು 80ರ ದಶಕದ ಕೋಲಾರದ ಹಳ್ಳಿಯೊಂದರಲ್ಲಿ. ಇಲ್ಲಿ ‘ಲ್ಯಾಂಡ್ ಲಾರ್ಡ್’ ಅಂದ್ರೆ ಕೇವಲ ಜಮೀನಿನ ಮಾಲೀಕರಲ್ಲ, ಬದಲಿಗೆ ಇಡೀ ಊರನ್ನೇ ತನ್ನ ಹಿಡಿತದಲ್ಲಿಟ್ಕೊಂಡು ಜನ್ರನ್ನು ಜೀತದಾಳಾಗಿ ಮಾಡಿಕೊಂಡಿರೋ ಪಾಳೆಗಾರರು. ಈ ಕ್ರೂರ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಶಕ್ತಿ ‘ರಾಚಯ್ಯ’. ಶೋಷಿತರ ಪರವಾಗಿ ಬೆಂಗಾವಲಾಗಿ ನಿಲ್ಲುವ ರಾಚಯ್ಯನ ಹೋರಾಟ ಮತ್ತು…
‘ಮುದ್ದು ಗುಮ್ಮ…ಮುದ್ದು ಗುಮ್ಮ ನೀನೇನಾ…’ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಈ ಹಾಡಿನದ್ದೆ ಸದ್ದು. ಪ್ರಜ್ವಲ್ ದೇವರಾಜ್ ಮತ್ತು ರಾಜ್ ಬಿ ಶೆಟ್ಟಿ ನಟನೆಯ ಕರಾವಳಿ ಸಿನಿಮಾದದಿಂದ ಮುದ್ದು ಗುಮ್ಮ ಹಾಡು ರಿಲೀಸ್ ಆಗಿದ್ದು ಗಾನಪ್ರಿಯ ಹೃದಯ ಗೆದ್ದಿದೆ. ಸಿದ್ ಶ್ರೀರಾಮ್ ಧ್ವನಿಯಲ್ಲಿ ಈ ಹಾಡು ಮೂಡಿ ಬಂದಿದ್ದು ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಹಾಡುಗಳ ಲಿಸ್ಟ್‌ಗೆ ಮುದ್ದು ಗುಮ್ಮ ಕೂಡ ಸೇರಿಕೊಳ್ಳುವುದು ಫಿಕ್ಸ್.. ಕರಾವಳಿ… ಸದ್ಯ ಸ್ಯಾಂಡಲ್‌ವುಡ್ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಕನ್ನಡದ ಸಿನಿಮಾ. ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕರಾವಳಿ ಸಿನಿಮಾದಿಂದ ಈಗಾಗಲೇ ಟೀಸರ್ ಮತ್ತು ಪೋಸ್ಟರ್‌ಗಳು ರಿಲೀಸ್ ಆಗಿದ್ದು ನಿರೀಕ್ಷೆ ದುಪ್ಪಟ್ಟು ಮಾಡಿತ್ತು. ಆದರೀಗ ಸಿನಿಮಾದಿಂದ ಮೊದಲ ಹಾಡು ಬಿಡುಗಡೆಯಾಗಿದೆ. ಸದ್ಯ ಬಂದಿರುವ ರೊಮ್ಯಾಂಟಿಂಕ್ ಹಾಡಿನಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಸಂಪದಾ ನಟಿಸಿದ್ದು ಸಿಕ್ಕಾಪಟ್ಟೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: 45 Review: ತೆರೆಮೇಲೆ ಅಕ್ಷರಶಃ ಶಿವತಾಂಡವ, ಮೇಕಿಂಗ್ ಮೂಲಕವೇ ಮೈ ಜುಂ ಎನಿಸುವ ʻಜನ್ಯʼ ಸಚಿನ್ ಬಸ್ರೂರು ಸಂಗೀತ…
ಡಿಸೆಂಬರ್ ತಿಂಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಧಮಾಕಾ ಶುರುವಾಗಿದೆ. ಡೆವಿಲ್ ಬಳಿಕ ಒಂದೇ ದಿನ ಅಂದರೆ, ಡಿಸೆಂಬರ್ 25ರಂದು ಮಾರ್ಕ್ ಮತ್ತು 45 ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಟ್ಟಿವೆ. 45 ಸಿನಿಮಾ ಹೇಗಿದೆ ಅನ್ನೋದನ್ನ ಈಗಾಗಲೇ ರಿವ್ಯೂವ್ ಮಾಡಿ ನಿಮ್ಮ ಮುಂದಿಟ್ಟಿದ್ದೇವೆ. ಇದೀಗ ಮಾರ್ಕ್ ಸರದಿ. ಮ್ಯಾಕ್ಸ್ ಸಿನಿಮಾ ತಂಡದ ಮತ್ತೊಂದು ಅಟೆಂಪ್ಟ್ ಈ ಮಾರ್ಕ್. ಅದೇ ನಿರ್ದೇಶಕರು, ಅದೇ ತಂಡದ ಜೊತೆ ಮೂಡಿಬಂದ ಸಿನಿಮಾ ಇದು. ಟ್ರೇಲರ್ ರಿಲೀಸ್ ಆದ ಮೇಲೆ, ಕುತೂಹಲಕ್ಕೆ ಒಗ್ಗರಣೆ ಹಾಕಿತ್ತು. ಹಾಗಾದ್ರೆ ಸಿನಿಮಾ ಅದೇ ಥರ ಮೂಡಿ ಬಂದಿದ್ಯಾ? ಕೊಟ್ಟ ದುಡ್ಡಿಗೆ ಮೋಸ ಇಲ್ವಾ? ಮಾರ್ಕ್ ಚಿತ್ರದ ಪೂರ್ತಿ ವಿಮರ್ಶೆ ಇಲ್ಲಿದೆ.ಮಾರ್ಕ್ ಸಿನಿಮಾದ ಒಂದೆಳೆ ಹೇಳೋದಾದ್ರೆ, ಈ ಚಿತ್ರದ ಕಥಾನಾಯಕನ ಹೆಸರು ಅಜಯ್ ಮಾರ್ಕಂಡೇಯ ಅಲಿಯಾಸ್ ಮಾರ್ಕ್. ಮ್ಯಾಕ್ಸ್ ಸಿನಿಮಾದಂತೆಯೇ ಇಲ್ಲಿಯೂ ಕಾಪ್ ಆಗಿ ಸಸ್ಪೆನ್ಷನ್‌ನಲ್ಲಿದ್ದರೂ, ತನ್ನದೇ ಸ್ಟೈಲ್‌ನಲ್ಲಿ ಡ್ಯೂಟಿ ಮಾಡೋ ಸೂಪರ್ ಕಾಪ್. ಇಂತಿಪ್ಪ ಕಾಪ್‌ಗೆ ಮಕ್ಕಳು ಇದ್ದಕ್ಕಿಂದ್ದಂತೆ ಕಿಡ್ನಾಪ್ ಆಗೋ ವಿಚಾರ ತಿಳಿಯುತ್ತೆ. ಅಲ್ಲಿಂದ…
ಚಿತ್ರ: 45ನಿರ್ದೇಶನ: ಅರ್ಜುನ್ ಜನ್ಯನಿರ್ಮಾಣ: ರಮೇಶ್ ರೆಡ್ಡಿತಾರಾಗಣ: ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ, ಕೌಸ್ತುಭ ಮಣಿ, ಸುಧಾರಾಣಿ, ಮೊಟ್ಟೈ ರಾಜೇಂದ್ರನ್, ಪ್ರಮೋದ್ ಶೆಟ್ಟಿ, ಮಂಜು ಪಾವಗಡರೇಟಿಂಗ್: 3.5/5 45 ಅನ್ನೋ ಸಿನಿಮಾ ಶುರುವಾಗಿ 3 ವರ್ಷ ಆಯ್ತು. ಸಿನಿಮಾ ಅನೌನ್ಸ್ ಆದ ಮೇಲೆ ಒಂದಲ್ಲ ಒಂದು ಕಾರಣಕ್ಕೆ ಕ್ಯೂರಿಯಾಸಿಟಿ ಕ್ರಿಯೆಟ್ ಮಾಡಿತ್ತು. ಕಾಸ್ಟಿಂಗ್ ವೈಸ್, ಮೇಕಿಂಗ್ ವಿಚಾರದಲ್ಲಿ ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಆಗಿತ್ತು. ಅದ್ರಲ್ಲೂ ಮೂರ್ಮೂರು ಸ್ಟಾರ್‌ಗಳನ್ನು ಮ್ಯಾನೇಜ್ ಮಾಡೋದು ನಿರ್ದೇಶಕರಿಗೆ ದೊಡ್ಡ ಕೆಲಸ. ಆದ್ರೆ, 45ನಲ್ಲಿ ತುಂಬ ಚೆನ್ನಾಗಿ ಬ್ಯಾಲನ್ಸ್ ಮಾಡಿದ್ದಾರೆ. 45 ಸಿನಿಮಾ ಅರ್ಜುನ್ ಜನ್ಯ ನಿರ್ದೇಶನ ಮಾಡಿರೋ ಸಿನಿಮಾ. ರಮೇಶ್ ರೆಡ್ಡಿ ಅವ್ರು ನಿರ್ಮಾಣ ಮಾಡಿದ ಹೈ ಬಜೆಟ್ ಸಿನಿಮಾ. ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿ ಮೇನ್ ಲೀಡ್ ಆಗಿ ನಟಿಸಿದ್ದಾರೆ. ಇದೆಲ್ಲ ಗೊತ್ತಿರೋ ವಿಷ್ಯಾ. ಇದೀಗ ಸ್ಟ್ರೇಟ್ ಆಗಿ ವಿಷ್ಯಕ್ಕೆ ಬರ್ತಿನಿ. 45 ಸಿನಿಮಾದ ಫಸ್ಟ್ ಸೀನ್‌ನಿಂದಲೇ…
ಹೈದರಾಬಾದ್: ರೆಬೆಲ್ ಸ್ಟಾರ್ ಪ್ರಭಾಸ್, ನಿರ್ದೇಶಕ ಮಾರುತಿ ಮತ್ತು ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಕಾಂಬಿನೇಷನ್‌ನಲ್ಲಿ ಸಿದ್ಧವಾಗುತ್ತಿರುವ ಬಹುನಿರೀಕ್ಷಿತ ಚಿತ್ರ ‘ದಿ ರಾಜಾ ಸಾಬ್’ ಚಿತ್ರದ ಎರಡನೇ ಹಾಡು ‘ಸಹನಾ ಸಹನಾ’ ಬುಧವಾರ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು. ಹೈದರಾಬಾದ್‌ನ ಮಾಲ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಮೆಲೋಡಿ ಹಾಡನ್ನು ಲೋಕಾರ್ಪಣೆ ಮಾಡಲಾಯಿತು. ಹಾರರ್-ಕಾಮಿಡಿ ಜಾನರ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ನಿರ್ಮಾಪಕರಾದ ಟಿ.ಜಿ. ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ಅವರು ಅದ್ಧೂರಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ. ಇದನ್ನೂ ಓದಿ: ತಾಂತ್ರಿಕವಾಗಿ ಬಲು ಗಟ್ಟಿಯಾಗಿದೆ ʻ45ʼ ಸಿನಿಮಾ! ಚೊಚ್ಚಲ ಚಿತ್ರದಲ್ಲಿ ಅರ್ಜುನ್ ಜನ್ಯ ಕಮಾಲ್ ಸಂಗೀತ ನಿರ್ದೇಶಕರ ಮಾತು ಈ ಕಾರ್ಯಕ್ರಮದದ ಕೇಂದ್ರ ಬಿಂದು ಸಂಗೀತ ನಿರ್ದೇಶಕ ಥಮನ್ ಎಸ್ ಮಾತನಾಡಿ, “ರಾಜಾ ಸಾಬ್ ಚಿತ್ರದ ಹಾಡುಗಳು ಅದ್ಭುತವಾಗಿ ಬಂದಿವೆ. ಈ ಹಿಂದೆ ಬಿಡುಗಡೆಯಾದ ಸಾಂಗ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈಗ ‘ಸಹನಾ ಸಹನಾ’ ಎಂಬ ಗೀತೆಯನ್ನು ನಿಮ್ಮ…
ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ ʻ45ʼ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅದಕ್ಕೂ ಮೊದಲು ಇದೇ ಚಿತ್ರದ ಬಹುನಿರೀಕ್ಷಿತ ಟ್ರೇಲರ್ ರಿಲೀಸ್ ಆಗಿ ಕುತೂಹಲಕ್ಕೆ ಒಗ್ಗರಣೆ ಹಾಕಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಈ ಸಿನಿಮಾವನ್ನು ಎಂ. ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಿಸಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇದೇ ಡಿಸೆಂಬರ್ 25 ರಂದು ರಿಲೀಸ್ ಆಗಲಿದೆ. ಬೆಂಗಳೂರಿನ ವಿದ್ಯಾಪೀಠದ ಬಳಿಯಿರುವ ಡೊಂಕಣ ಮೈದಾನದಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಸಮಾರಂಭದಲ್ಲಿ, ಬೆಂಗಳೂರು ನಗರದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಬೆಂಗಳೂರು ಸೇರಿದಂತೆ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಈ ಚಿತ್ರದ ಟ್ರೇಲರ್ ಅನಾವರಣವಾಗಿದ್ದು ವಿಶೇಷ. ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ, ಸುಧಾರಾಣಿ, ಪ್ರಮೋದ್ ಶೆಟ್ಟಿ, ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಕಾರ್ಯಕ್ರಮದಲ್ಲಿ…
ಬೆಳಗಾವಿಯ ಶ್ರೀ ಪ್ರಭು ಯತ್ನಟ್ಟಿಯವರು ಪಿ.ಆರ್.ಅಸೋಸಿಯೇಟ್ಸ್ ಸಂಸ್ಥೆಯ ಮೂಲಕ ನಿರ್ಮಿಸುತ್ತಿರುವ ಪ್ರೊ. ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ ‘ಮಹಾಕವಿ’ ಕನ್ನಡ ಸಿನಿಮಾದ ಚಿತ್ರೀಕರಣವು ಮುಕ್ತಾಯಗೊಂಡಿದೆ. ಈಗ ಚಿತ್ರೀಕರಣೋತ್ತರ ಕೆಲಸಗಳು ನಡೆಯುತ್ತಿವೆ. ‘ಮಹಾಕವಿ’ಯು ಬರಗೂರರ ನಿರ್ದೇಶನದ ಇಪ್ಪತ್ತೈದನೇ ಚಿತ್ರ ಎನ್ನುವುದು ಒಂದು ವಿಶೇಷ. ‘ಮಹಾಕವಿ’ ಚಿತ್ರವು ಕನ್ನಡದ ಆದಿಕವಿಯೆಂದೇ ಪ್ರಸಿದ್ಧನಾದ ಪಂಪನ ಕಾವ್ಯಗಳನ್ನು ಆಧರಿಸಿದೆ. ಇದು ಪಂಪನ ಜೀವನ ಚರಿತ್ರೆಯಲ್ಲ. ಪಂಪನ ಪರಿಕಲ್ಪನೆಗಳ ದೃಶ್ಯರೂಪಕ. ಅಂದರೆ ಪಂಪ ಮಹಾಕವಿಯು ತನ್ನ ಕಾವ್ಯಗಳಲ್ಲಿ ಪ್ರತಿಪಾದಿಸಿದ ಪರಿಕಲ್ಪನೆಗಳಿಗೆ ಕಥನ ರೂಪ ಕೊಡಲಾಗಿದೆ. ಪಂಪ ಮಹಾಕವಿಯು ರಾಜನ ಆಸ್ಥಾನದಲ್ಲಿದ್ದೂ ಸೃಜನಶೀಲ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಂಡು ಬರೆದ ಕವಿ. ಪ್ರಭುತ್ವ ಮತ್ತು ಸೃಜನಶೀಲ ಸ್ವಾತಂತ್ರ್ಯವನ್ನು ಕುರಿತ ಪಂಪನ ಪರಿಕಲ್ಪನೆಯು ಇಂದಿಗೂ ಪ್ರಸ್ತುತವಾಗಿದೆ. ಅಂತೆಯೇ ಕನ್ನಡ ಸಾಹಿತ್ಯದಲ್ಲಿ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಮೊಟ್ಟಮೊದಲ ಕವಿ ಪಂಪ. ‘ಆದಿಪುರಾಣ’ದಲ್ಲಿ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಪ್ರತಿಪಾದಿಸಿದ ಪಂಪ, ‘ವಿಕ್ರಮಾರ್ಜುನ ವಿಜಯ’ದಲ್ಲಿ ಕರ್ಣನ ಪಾತ್ರದ ಮೂಲಕ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದಾನೆ. ‘ಆದಿಪುರಾಣ’ದಲ್ಲಿ ಅಧಿಕಾರದ ಅಹಂಕಾರಕ್ಕೆ…
ಚಿತ್ರ – ದಿ ಡೆವಿಲ್ನಿರ್ಮಾಪಕರು – ಶ್ರೀ ಜೈಮಾತಾ ಕಂಬೈನ್ಸ್ ನಿರ್ದೇಶನ – ಪ್ರಕಾಶ್ ಛಾಯಾಗ್ರಹಣ – ಸುಧಾಕರ್ ಎಸ್. ರಾಜ್ ಸಂಗೀತ – B. ಅಜನೀಶ್ ಲೋಕನಾಥ್ ಸಂಕಲನ – ಹರೀಶ್ ಕೊಮ್ಮೆ ಕಲಾವಿದರು :- ದರ್ಶನ್, ಶರ್ಮಿಳಾ ಮಾಂಡ್ರೆ, ಶೋಭರಾಜ್, ಅಚ್ಯುತ್ ಕುಮಾರ್, ಮಹೇಶ್ ಮಾಂಜ್ರೇಕರ್, ರಚನಾ ರಾಯ್, ವಿನಯ್ ಗೌಡ, ಮುಂತಾದವರು. ಈ ವರ್ಷದ Most Expected ಸಿನಿಮಾಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರ ದಿ ಡೆವಿಲ್ ಸಹ ಒಂದು. ಇದೀಗ ಈ ಸಿನಿಮಾ ಅಷ್ಟೇ ಗ್ರ್ಯಾಂಡ್ ಆಗಿ ಥಿಯೇಟರ್ಸ್‌ಗೆ ಎಂಟ್ರಿ ಕೊಟ್ಟಿದೆ. ಈಗ ನೇರವಾಗಿ ವಿಷ್ಯಕ್ಕೆ ಬಂದು ಬಿಡ್ತೀನಿ. ಈ ಸಿನಿಮಾ ಹೇಗಿದೆ? ಪ್ಲಸ್ ಏನು? ಮೈನಸ್ ಏನು? ಯಾವುದು ವರ್ಕ್ ಆಗಲಿಲ್ಲ ಅದೆಲ್ಲದ್ರ ಬಗ್ಗೆ ಡಿಟೇಲ್ಡ್ ಆಗಿಯೇ ಮಾತಾಡೋಣ. ಡೆವಿಲ್ ಸಿನಿಮಾದಲ್ಲಿ ಸಿಎಂ ರಾಜಶೇಖರ್, ಕರೆಪ್ಶನ್ ಆರೋಪದ ಮೇಲೆ ಜೈಲು ಸೇರ್ತಾರೆ. ಅದೇ ಸಿಎಂ ಕುರ್ಚಿ ಮೇಲೆ ಹಲವರ ಕಣ್ಣು ಬೀಳುತ್ತೆ. ಹೀಗಿರುವಾಗ, ಆ ಕುರ್ಚಿ…