Close Menu
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ
What's Hot

ಗಿಲ್ಲಿ ನಾಯಕನಾಗಿ ನಟಿಸಿರುವ `ಸೂಪರ್ ಹಿಟ್’ ಚಿತ್ರ ಫೆಬ್ರವರಿ 27ರಂದು ತೆರೆಗೆ!

February 10, 2026

ವೀರ ಕಂಬಳ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ!

February 10, 2026

Landlord Review: ದುನಿಯಾ ವಿಜಯ್-‌ ರಾಜ್‌ ಬಿ ಶೆಟ್ಟಿಯ ʻಲ್ಯಾಂಡ್‌ ಲಾರ್ಡ್‌ʼ ಸಿನಿಮಾ ಹೇಗಿದೆ?

January 23, 2026
Facebook X (Twitter) Instagram
Facebook X (Twitter) Instagram
ಜಗಲಿ ಕಟ್ಟೆ
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ
ಜಗಲಿ ಕಟ್ಟೆ
Home»Uncategorized»‘ಕರಾವಳಿ’ಯಿಂದ ಬಂತು ಫಸ್ಟ್ ರೊಮ್ಯಾಂಟಿಕ್ ಮುದ್ದು ಗುಮ್ಮ
Uncategorized

‘ಕರಾವಳಿ’ಯಿಂದ ಬಂತು ಫಸ್ಟ್ ರೊಮ್ಯಾಂಟಿಕ್ ಮುದ್ದು ಗುಮ್ಮ

Jagali KatteBy Jagali KatteJanuary 23, 2026No Comments2 Mins Read
WhatsApp Facebook Twitter LinkedIn Email Copy Link
ಕರಾವಳಿ ಚಿತ್ರದ ಮುದ್ದು ಗುಮ್ಮ ಹಾಡು ಬಿಡುಗಡೆ
Share
Facebook Twitter LinkedIn Pinterest Email

‘ಮುದ್ದು ಗುಮ್ಮ…ಮುದ್ದು ಗುಮ್ಮ ನೀನೇನಾ…’ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಈ ಹಾಡಿನದ್ದೆ ಸದ್ದು. ಪ್ರಜ್ವಲ್ ದೇವರಾಜ್ ಮತ್ತು ರಾಜ್ ಬಿ ಶೆಟ್ಟಿ ನಟನೆಯ ಕರಾವಳಿ ಸಿನಿಮಾದದಿಂದ ಮುದ್ದು ಗುಮ್ಮ ಹಾಡು ರಿಲೀಸ್ ಆಗಿದ್ದು ಗಾನಪ್ರಿಯ ಹೃದಯ ಗೆದ್ದಿದೆ. ಸಿದ್ ಶ್ರೀರಾಮ್ ಧ್ವನಿಯಲ್ಲಿ ಈ ಹಾಡು ಮೂಡಿ ಬಂದಿದ್ದು ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಹಾಡುಗಳ ಲಿಸ್ಟ್‌ಗೆ ಮುದ್ದು ಗುಮ್ಮ ಕೂಡ ಸೇರಿಕೊಳ್ಳುವುದು ಫಿಕ್ಸ್..

ಕರಾವಳಿ… ಸದ್ಯ ಸ್ಯಾಂಡಲ್‌ವುಡ್ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಕನ್ನಡದ ಸಿನಿಮಾ. ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕರಾವಳಿ ಸಿನಿಮಾದಿಂದ ಈಗಾಗಲೇ ಟೀಸರ್ ಮತ್ತು ಪೋಸ್ಟರ್‌ಗಳು ರಿಲೀಸ್ ಆಗಿದ್ದು ನಿರೀಕ್ಷೆ ದುಪ್ಪಟ್ಟು ಮಾಡಿತ್ತು. ಆದರೀಗ ಸಿನಿಮಾದಿಂದ ಮೊದಲ ಹಾಡು ಬಿಡುಗಡೆಯಾಗಿದೆ. ಸದ್ಯ ಬಂದಿರುವ ರೊಮ್ಯಾಂಟಿಂಕ್ ಹಾಡಿನಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಸಂಪದಾ ನಟಿಸಿದ್ದು ಸಿಕ್ಕಾಪಟ್ಟೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: 45 Review: ತೆರೆಮೇಲೆ ಅಕ್ಷರಶಃ ಶಿವತಾಂಡವ, ಮೇಕಿಂಗ್‌ ಮೂಲಕವೇ ಮೈ ಜುಂ ಎನಿಸುವ ʻಜನ್ಯʼ

ಸಚಿನ್ ಬಸ್ರೂರು ಸಂಗೀತ ನೀಡಿರುವ ಮುದ್ದು ಗುಮ್ಮ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದಾರೆ. ಪುಟ್ಟ ಟೀಸರ್ ಮೂಲಕವೇ ಭಾರಿ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ಕರಾವಳಿ ಇದೀಗ ಮೆಲೋಡಿ ರೊಮ್ಯಾಂಟಿಕ್ ಹಾಡನ್ನ ರಿಲೀಸ್ ಮಾಡಿ ಮತ್ತಷ್ಟು ಕಾತರವನ್ನು ಮತ್ತಷ್ಟು ಹೆಚ್ಚಿಸಿದೆ. ಸಿನಿಮಾ ಯಾವಾಗ ಎಂದು ಸಿನಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನೇನು ಸದ್ಯದಲ್ಲೇ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ.

‘ಕರಾವಳಿ’ಯಿಂದ ಬಂತು ಫಸ್ಟ್ ರೊಮ್ಯಾಂಟಿಕ್ ಮುದ್ದು ಗುಮ್ಮ…

ಕರಾವಳಿ ಹೆಸರೆ ಹೇಳುವ ಹಾಗೆ ಅಲ್ಲಿನ ಸಂಸ್ಕೃತಿ, ಸೊಗಡಿನ ಬಗ್ಗೆ ಇರುವ ಸಿನಿಮಾ. ಚಿತ್ರದ ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಮಾವೀರ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನೂ ಉಳಿದಂತೆ ಸಿನಿಮಾದ ಪವರ್ ಫುಲ್ ಪಾತ್ರದಲ್ಲಿ ನಟ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಹಾಗೂ ನಾಯಕಿಯಾಗಿ ಸಂಪದಾ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:  ʻಡೆವಿಲ್‌ʼ ಜಾತ್ರೆಯಲ್ಲಿ ಉತ್ಸವ ಮೂರ್ತಿಗಷ್ಟೇ ಸಿಂಗಾರ ಸಾಕಾ? ʻದಿ ಡೆವಿಲ್‌ʼ ಸಿನಿಮಾ ವಿಮರ್ಶೆ

ಕರಾವಳಿ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಗಾಣಿಗ ಫಿಲ್ಮ್ಸ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಅಭಿಮನ್ಯೂ ಸದಾನಂದನ್ ಕ್ಯಾಮರ ವರ್ಕ್ ಚಿತ್ರಕ್ಕಿದೆ.

Karavali karavali Kannada Movie Prajwal Devraj ಕರಾವಳಿ ಪ್ರಜ್ವಲ್‌ ದೇವರಾಜ್‌ ಮುದ್ದು ಗುಮ್ಮ
Share. Facebook Twitter Pinterest LinkedIn Tumblr Email
Jagali Katte
  • Website

Related Posts

ಗಿಲ್ಲಿ ನಾಯಕನಾಗಿ ನಟಿಸಿರುವ `ಸೂಪರ್ ಹಿಟ್’ ಚಿತ್ರ ಫೆಬ್ರವರಿ 27ರಂದು ತೆರೆಗೆ!

February 10, 2026

ವೀರ ಕಂಬಳ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ!

February 10, 2026

Landlord Review: ದುನಿಯಾ ವಿಜಯ್-‌ ರಾಜ್‌ ಬಿ ಶೆಟ್ಟಿಯ ʻಲ್ಯಾಂಡ್‌ ಲಾರ್ಡ್‌ʼ ಸಿನಿಮಾ ಹೇಗಿದೆ?

January 23, 2026

Mark Review: ಆ 18 ಗಂಟೆ! ಕಿಚ್ಚ ಸುದೀಪ್‌ ನಟನೆಯ ʻಮಾರ್ಕ್‌ʼ ಸಿನಿಮಾ ಚಿತ್ರ ವಿಮರ್ಶೆ

December 27, 2025
Add A Comment
Leave A Reply Cancel Reply

Editors Picks
Latest Posts

Subscribe to Updates

Get the latest sports news from SportsSite about soccer, football and tennis.

© 2026 Jagali Katte. Designed by Karnataka Best Digital Services.
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ

Type above and press Enter to search. Press Esc to cancel.