Close Menu
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ
What's Hot

ಗಿಲ್ಲಿ ನಾಯಕನಾಗಿ ನಟಿಸಿರುವ `ಸೂಪರ್ ಹಿಟ್’ ಚಿತ್ರ ಫೆಬ್ರವರಿ 27ರಂದು ತೆರೆಗೆ!

February 10, 2026

ವೀರ ಕಂಬಳ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ!

February 10, 2026

Landlord Review: ದುನಿಯಾ ವಿಜಯ್-‌ ರಾಜ್‌ ಬಿ ಶೆಟ್ಟಿಯ ʻಲ್ಯಾಂಡ್‌ ಲಾರ್ಡ್‌ʼ ಸಿನಿಮಾ ಹೇಗಿದೆ?

January 23, 2026
Facebook X (Twitter) Instagram
Facebook X (Twitter) Instagram
ಜಗಲಿ ಕಟ್ಟೆ
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ
ಜಗಲಿ ಕಟ್ಟೆ
Home»ಚಿತ್ರವಿಮರ್ಶೆ»Mark Review: ಆ 18 ಗಂಟೆ! ಕಿಚ್ಚ ಸುದೀಪ್‌ ನಟನೆಯ ʻಮಾರ್ಕ್‌ʼ ಸಿನಿಮಾ ಚಿತ್ರ ವಿಮರ್ಶೆ
ಚಿತ್ರವಿಮರ್ಶೆ

Mark Review: ಆ 18 ಗಂಟೆ! ಕಿಚ್ಚ ಸುದೀಪ್‌ ನಟನೆಯ ʻಮಾರ್ಕ್‌ʼ ಸಿನಿಮಾ ಚಿತ್ರ ವಿಮರ್ಶೆ

Jagali KatteBy Jagali KatteDecember 27, 2025Updated:December 27, 2025No Comments4 Mins Read
WhatsApp Facebook Twitter LinkedIn Email Copy Link
Share
Facebook Twitter LinkedIn Pinterest Email

ಡಿಸೆಂಬರ್‌ ತಿಂಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಧಮಾಕಾ ಶುರುವಾಗಿದೆ. ಡೆವಿಲ್‌ ಬಳಿಕ ಒಂದೇ ದಿನ ಅಂದರೆ, ಡಿಸೆಂಬರ್‌ 25ರಂದು ಮಾರ್ಕ್‌ ಮತ್ತು 45 ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಟ್ಟಿವೆ. 45 ಸಿನಿಮಾ ಹೇಗಿದೆ ಅನ್ನೋದನ್ನ ಈಗಾಗಲೇ ರಿವ್ಯೂವ್‌ ಮಾಡಿ ನಿಮ್ಮ ಮುಂದಿಟ್ಟಿದ್ದೇವೆ. ಇದೀಗ ಮಾರ್ಕ್‌ ಸರದಿ.

ಮ್ಯಾಕ್ಸ್‌ ಸಿನಿಮಾ ತಂಡದ ಮತ್ತೊಂದು ಅಟೆಂಪ್ಟ್‌ ಈ ಮಾರ್ಕ್‌. ಅದೇ ನಿರ್ದೇಶಕರು, ಅದೇ ತಂಡದ ಜೊತೆ ಮೂಡಿಬಂದ ಸಿನಿಮಾ ಇದು. ಟ್ರೇಲರ್‌ ರಿಲೀಸ್‌ ಆದ ಮೇಲೆ, ಕುತೂಹಲಕ್ಕೆ ಒಗ್ಗರಣೆ ಹಾಕಿತ್ತು. ಹಾಗಾದ್ರೆ ಸಿನಿಮಾ ಅದೇ ಥರ ಮೂಡಿ ಬಂದಿದ್ಯಾ? ಕೊಟ್ಟ ದುಡ್ಡಿಗೆ ಮೋಸ ಇಲ್ವಾ? ಮಾರ್ಕ್‌ ಚಿತ್ರದ ಪೂರ್ತಿ ವಿಮರ್ಶೆ ಇಲ್ಲಿದೆ.
ಮಾರ್ಕ್‌ ಸಿನಿಮಾದ ಒಂದೆಳೆ ಹೇಳೋದಾದ್ರೆ, ಈ ಚಿತ್ರದ ಕಥಾನಾಯಕನ ಹೆಸರು ಅಜಯ್‌ ಮಾರ್ಕಂಡೇಯ ಅಲಿಯಾಸ್‌ ಮಾರ್ಕ್‌. ಮ್ಯಾಕ್ಸ್‌ ಸಿನಿಮಾದಂತೆಯೇ ಇಲ್ಲಿಯೂ ಕಾಪ್‌ ಆಗಿ ಸಸ್ಪೆನ್ಷನ್‌ನಲ್ಲಿದ್ದರೂ, ತನ್ನದೇ ಸ್ಟೈಲ್‌ನಲ್ಲಿ ಡ್ಯೂಟಿ ಮಾಡೋ ಸೂಪರ್‌ ಕಾಪ್‌. ಇಂತಿಪ್ಪ ಕಾಪ್‌ಗೆ ಮಕ್ಕಳು ಇದ್ದಕ್ಕಿಂದ್ದಂತೆ ಕಿಡ್ನಾಪ್‌ ಆಗೋ ವಿಚಾರ ತಿಳಿಯುತ್ತೆ. ಅಲ್ಲಿಂದ ಶುರು ಇನ್ವೆಷ್ಟಿಗೇಷನ್‌. ಅಷ್ಟಕ್ಕೂ ಮಕ್ಳು ಮಿಸ್‌ ಆಗೋದಕ್ಕೆ ಕಾರಣ ಏನು? ಇದರ ಹಿಂದೆ ಯಾರಿದ್ದಾರೆ? ರಾಜಕೀಯದ ಕೈವಾಡ ಏನು? ಇದ್ರ ನಡುವೆ ಡ್ರಗ್ಸ್‌ ಘಾಟೂ ಮೂಗಿಗೆ ತಾಕುತ್ತೆ. ಇದೆಲ್ಲದರ ಇನ್‌ ಡಿಟೇಲ್ಸ್‌ ಅನ್ನ ನೀವು ಸಿನಿಮಾ ನೋಡಿನೇ ತಿಳ್ಕೋಬೇಕು.

ಇದನ್ನೂ ಓದಿ: 45 Review: ತೆರೆಮೇಲೆ ಅಕ್ಷರಶಃ ಶಿವತಾಂಡವ, ಮೇಕಿಂಗ್‌ ಮೂಲಕವೇ ಮೈ ಜುಂ ಎನಿಸುವ ʻಜನ್ಯʼ

ಇಡೀ ಸಿನಿಮಾದ ಮೇನ್‌ ಹೈಲೈಟ್‌ ಅಂದ್ರೆ, ಚಿತ್ರದ ಆಕ್ಷನ್‌ ಮತ್ತು ಫೈಟ್ಸ್‌ನ ಕೋರಿಯೋಗ್ರಫಿ. ಆಕ್ಷನ್‌ ಸೀನ್‌ಗಳನ್ನು ಸಖತ್ತಾಗಿ ಪ್ರಸೆಂಟ್‌ ಮಾಡಿದ್ದಾರೆ. ಅಷ್ಟೇ ಲೀಲಾಜಾಲವಾಗಿ ಸಾಹಸ ಮೆರೆದಿದ್ದಾರೆ ಕಿಚ್ಚ ಸುದೀಪ್. ಮ್ಯಾಕ್ಸ್‌ ಸಿನಿಮಾಕ್ಕಿಂತ ಒಂದು ತೂಕ ಹೆಚ್ಚೇ ಆಕ್ಷನ್‌ ನೋಡೋಕೆ ಸಿಕ್ತು ಎನ್ನಬಹುದು. 18 ಗಂಟೆಗಳಲ್ಲಿ ನಡೆಯೋ ಕಥೆ ಆಗಿರೋದ್ರಿಂದ, ಚೂರು ಹಗಲು, ಬಹುತೇಕ ಕತ್ತಲಲ್ಲೇ ಶೂಟಿಂಗ್‌ ಮಾಡಿದ್ದಾರೆ ನಿರ್ದೇಶಕರು.

ಡಿಸೆಂಬರ್‌ ತಿಂಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಧಮಾಕಾ ಶುರುವಾಗಿದೆ. ಡೆವಿಲ್‌ ಬಳಿಕ ಒಂದೇ ದಿನ ಅಂದರೆ, ಡಿಸೆಂಬರ್‌ 25ರಂದು ಮಾರ್ಕ್‌ ಮತ್ತು 45 ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಟ್ಟಿವೆ. 45 ಸಿನಿಮಾ ಹೇಗಿದೆ ಅನ್ನೋದನ್ನ ಈಗಾಗಲೇ ರಿವ್ಯೂವ್‌ ಮಾಡಿ ನಿಮ್ಮ ಮುಂದಿಟ್ಟಿದ್ದೇವೆ. ಇದೀಗ ಮಾರ್ಕ್‌ ಸರದಿ.

ಇದನ್ನೂ ಓದಿ: The Devil Review: ʻಡೆವಿಲ್‌ʼ ಜಾತ್ರೆಯಲ್ಲಿ ಉತ್ಸವ ಮೂರ್ತಿಗಷ್ಟೇ ಸಿಂಗಾರ ಸಾಕಾ? ʻದಿ ಡೆವಿಲ್‌ʼ ಸಿನಿಮಾ ವಿಮರ್ಶೆ

ಮ್ಯಾಕ್ಸ್‌ ಸಿನಿಮಾ ತಂಡದ ಮತ್ತೊಂದು ಅಟೆಂಪ್ಟ್‌ ಈ ಮಾರ್ಕ್‌. ಅದೇ ನಿರ್ದೇಶಕರು, ಅದೇ ತಂಡದ ಜೊತೆ ಮೂಡಿಬಂದ ಸಿನಿಮಾ ಇದು. ಟ್ರೇಲರ್‌ ರಿಲೀಸ್‌ ಆದ ಮೇಲೆ, ಕುತೂಹಲಕ್ಕೆ ಒಗ್ಗರಣೆ ಹಾಕಿತ್ತು. ಹಾಗಾದ್ರೆ ಸಿನಿಮಾ ಅದೇ ಥರ ಮೂಡಿ ಬಂದಿದ್ಯಾ? ಕೊಟ್ಟ ದುಡ್ಡಿಗೆ ಮೋಸ ಇಲ್ವಾ? ಮಾರ್ಕ್‌ ಚಿತ್ರದ ಪೂರ್ತಿ ವಿಮರ್ಶೆ ಇಲ್ಲಿದೆ.

ಮಾರ್ಕ್‌ ಸಿನಿಮಾದ ಒಂದೆಳೆ ಹೇಳೋದಾದ್ರೆ, ಈ ಚಿತ್ರದ ಕಥಾನಾಯಕನ ಹೆಸರು ಅಜಯ್‌ ಮಾರ್ಕಂಡೇಯ ಅಲಿಯಾಸ್‌ ಮಾರ್ಕ್‌. ಮ್ಯಾಕ್ಸ್‌ ಸಿನಿಮಾದಂತೆಯೇ ಇಲ್ಲಿಯೂ ಕಾಪ್‌ ಆಗಿ ಸಸ್ಪೆನ್ಷನ್‌ನಲ್ಲಿದ್ದರೂ, ತನ್ನದೇ ಸ್ಟೈಲ್‌ನಲ್ಲಿ ಡ್ಯೂಟಿ ಮಾಡೋ ಸೂಪರ್‌ ಕಾಪ್‌. ಇಂತಿಪ್ಪ ಕಾಪ್‌ಗೆ ಮಕ್ಕಳು ಇದ್ದಕ್ಕಿಂದ್ದಂತೆ ಕಿಡ್ನಾಪ್‌ ಆಗೋ ವಿಚಾರ ತಿಳಿಯುತ್ತೆ. ಅಲ್ಲಿಂದ ಶುರು ಇನ್ವೆಷ್ಟಿಗೇಷನ್‌. ಅಷ್ಟಕ್ಕೂ ಮಕ್ಳು ಮಿಸ್‌ ಆಗೋದಕ್ಕೆ ಕಾರಣ ಏನು? ಇದರ ಹಿಂದೆ ಯಾರಿದ್ದಾರೆ? ರಾಜಕೀಯದ ಕೈವಾಡ ಏನು? ಇದ್ರ ನಡುವೆ ಡ್ರಗ್ಸ್‌ ಘಾಟೂ ಮೂಗಿಗೆ ತಾಕುತ್ತೆ. ಇದೆಲ್ಲದರ ಇನ್‌ ಡಿಟೇಲ್ಸ್‌ ಅನ್ನ ನೀವು ಸಿನಿಮಾ ನೋಡಿನೇ ತಿಳ್ಕೋಬೇಕು.

ಇಡೀ ಸಿನಿಮಾದ ಮೇನ್‌ ಹೈಲೈಟ್‌ ಅಂದ್ರೆ, ಚಿತ್ರದ ಆಕ್ಷನ್‌ ಮತ್ತು ಫೈಟ್ಸ್‌ನ ಕೋರಿಯೋಗ್ರಫಿ. ಆಕ್ಷನ್‌ ಸೀನ್‌ಗಳನ್ನು ಸಖತ್ತಾಗಿ ಪ್ರಸೆಂಟ್‌ ಮಾಡಿದ್ದಾರೆ. ಅಷ್ಟೇ ಲೀಲಾಜಾಲವಾಗಿ ಸಾಹಸ ಮೆರೆದಿದ್ದಾರೆ ಕಿಚ್ಚ ಸುದೀಪ್. ಮ್ಯಾಕ್ಸ್‌ ಸಿನಿಮಾಕ್ಕಿಂತ ಒಂದು ತೂಕ ಹೆಚ್ಚೇ ಆಕ್ಷನ್‌ ನೋಡೋಕೆ ಸಿಕ್ತು ಎನ್ನಬಹುದು. 18 ಗಂಟೆಗಳಲ್ಲಿ ನಡೆಯೋ ಕಥೆ ಆಗಿರೋದ್ರಿಂದ, ಚೂರು ಹಗಲು, ಬಹುತೇಕ ಕತ್ತಲಲ್ಲೇ ಶೂಟಿಂಗ್‌ ಮಾಡಿದ್ದಾರೆ ನಿರ್ದೇಶಕರು.

ಪ್ರೊಡಕ್ಷನ್‌ ಡಿಪಾರ್ಟ್‌ಮೆಂಟ್‌ ಒಳ್ಳೆಯ ಕೆಲಸ ಮಾಡಿದೆ. ಅಜನೀಶ್ ಲೋಕನಾಥ್‌ ಅವರ ಮ್ಯೂಸಿಕ್‌, ಸಿನಿಮಾದ ಮತ್ತೊಂದು ಹೈಲೈಟ್. ಬ್ಯಾಕ್‌ ಗ್ರೌಂಡ್‌ ಮ್ಯೂಸಿಕ್‌ನಿಂದಲೇ ಸಿನಿಮಾ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುತ್ತೆ. ದಾದಾ ಯಾರ್‌ ಗೊತ್ತಾ? ಹಾಡು ಆರಂಭದಲ್ಲಿ ಸಖತ್‌ ಕಿಕ್ ಏರಿಸುತ್ತೆ. ಸೈಕೋ ಸೈತಾನ್, ಮಸ್ತ್‌ ಮಲೈಕಾ ಗೀತೆ ಕುಣಿಸುತ್ತೆ. ಕಾಳಿ ಹಾಡಿನಲ್ಲಿ ಡಿವೈನಿಟಿ ವರ್ಕ್‌ ಆಗಿದೆ. ಒಟ್ಟಾರೆ, ಮ್ಯೂಸಿಕ್‌ ವಿಷ್ಯದಲ್ಲಿ ಅಜನೀಶ್‌ ಗೆದ್ದಿದ್ದಾರೆ. ಈ ಸಿನಿಮಾದ ಮತ್ತೊಬ್ಬ ಹೀರೋ ಅಂದ್ರೆ ಅದು ಅಜನೀಶ್‌ ಅಂತಲೇ ಹೇಳಬಹುದು.

ಸಿನಿಮಾ ಶುರುವಾಗ್ತಿದ್ದಂತೆ ಹತ್ತಾರು ಪಾತ್ರಗಳ ಹೆಸರುಗಳು ಕಿವಿಗೆ ಬೀಳುತ್ವೆ. ಸಿನಿಮಾ ಡೈಲಾಗ್ಸ್‌ ನಡುವೆ, ಆ ಹೆಸರುಗಳು ರಿಪೀಟ್‌ ಆಗೋದ್ರಿಂದ ಪ್ರೇಕ್ಷಕನಿಗೂ ಕನ್‌ಫ್ಯೂಸ್‌ ಆಗಿದ್ದುಂಟು. ಸುದೀಪ್‌ ಅವರ ನಟನೆ ಬಗ್ಗೆ ದೂಸ್ರಾ ಮಾತೇ ಇಲ್ಲ. ಪಾತ್ರ ಬೇಡುವ ಆ ಇಂಟೆನ್ಸಿಟಿ ಅವ್ರ ಪ್ರತಿ ಫ್ರೇಮ್‌ನಲ್ಲೂ ಕಾಣಿಸುತ್ತೆ. ನವೀನ್‌ ಚಂದ್ರ ಮಾಡಿರೋ ಭದ್ರ ಪಾತ್ರ ಸಖತ್‌ ವೈಲೆಂಟ್‌ ಆಗಿದೆ. ಆದ್ರೆ, ಅಷ್ಟ್ಯಾಕೆ ವೈಲೆಂಟ್‌ ಅನ್ನೋದರ ಡೆಪ್ತ್‌ ಮಿಸ್ಸಿಂಗ್‌ ಅನ್ಸುತ್ತೆ. ಸಿನಿಮಾದಲ್ಲಿ ರಾಜಕೀಯದ ಶ್ಯಾಡೋ ಸ್ವಲ್ಪವೇ ಕಾಣಿಸಿದರೂ, ಅದರ ಇಂಟೆನ್ಸಿಟಿ ಕ್ಯೂರಿಯಸ್ ಆಗಿದೆ. ತಮಿಳು ನಟ ಯೋಗಿ ಬಾಬುಗೆ ಹೆಚ್ಚು ಸ್ಕ್ರೀನ್‌ ಸ್ಪೇಸ್‌ ಇಲ್ಲ. ಸಿಕ್ಕ ಅವಧಿಯಲ್ಲಿಯೇ ನಗಿಸೋ ಪ್ರಯತ್ನ ಮಾಡಿದ್ದಾರೆ. ಮಲಯಾಳಿ ನಟ ಶೈನ್‌ ಟಾಮ್‌ ಚಾಕೋ ಗಮನ ಸೆಳೆದಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಅವ್ರ ಡ್ಯೂಲ್‌ ಶೇಡ್‌ ಅಚ್ಚರಿ ಮೂಡಿಸುತ್ತೆ.

ಫಸ್ಟ್‌ ಹಾಫ್‌ನಲ್ಲಿ ಸಿನಿಮಾದ ಮೇನ್‌ ಲೀಡ್‌ಗೆ ಟೇಕ್‌ ಆಫ್‌ ಆಗಲು ನಿರ್ದೇಶಕರು ಹೆಚ್ಚು ಟೈಮ್‌ ತೆಗೊಂಡಿಲ್ಲ. ಬೇಗನೇ ವಿಷ್ಯಕ್ಕೆ ಬಂದಿದ್ದಾರೆ. ಮುಂದೇನಾಗುತ್ತೆ ಅನ್ನೋದನ್ನ ಅಷ್ಟೇ ವೇಗವಾಗಿಯೇ ಹೇಳಿದ್ದಾರೆ. ಅದ್ರ ಜತೆಗೆ ಎರಡನೇ ಭಾಗಕ್ಕೆ ಬೇಕಾದ ಟೆನ್ಷನ್‌, ಕ್ಯೂರಿಯಾಸಿಟಿಯನ್ನು ಫಸ್ಟ್‌ ಹಾಫ್‌ ಎಂಡ್‌ನಲ್ಲಿಯೇ ಕೊಟ್ಟಿದ್ದಾರೆ. ಚೂರು ಆಚೀಚೆ ನೀವು ಗಮನ ಹರಿಸಿದ್ರೂ ಲಿಂಕ್‌ ಮಿಸ್‌ ಆಗೋ ಸಾಧ್ಯತೆ ಇದೆ. ಕ್ಲೈಮ್ಯಾಕ್ಸ್‌ ಸಖತ್‌ ಇಂಟ್ರೆಸ್ಟಿಂಗ್‌ ಅನ್ಸುತ್ತೆ.

ಇನ್ನು ಈ ಸಿನಿಮಾದಲ್ಲಿ ಮಿಸ್ಸಿಂಗ್‌ ಏನು ಅನ್ನೋದನ್ನ ನೋಡೋದಾದ್ರೆ, ಮಾರ್ಕ್‌ ಒಂದು ಪಕ್ಕಾ ಕಮರ್ಷಿಯಲ್‌ ಸಿನಿಮಾ. ಕಮರ್ಷಿಯಲ್‌ ಕೋನದಲ್ಲಿ ಕಥೆ ಟ್ರಾವೆಲ್‌ ಆಗೋವಾಗ, ಒಂದೇ ಒಂದು ಲಿಂಕ್‌ ಅಥವಾ ಲಾಜಿಕ್‌ ಮಿಸ್‌ ಆದ್ರೂ, ಪ್ರೇಕ್ಷಕನಿಗೂ ಅದು ಕಸಿವಿಸಿ ಆಗುತ್ತೆ. ಕಥೆ ಹೇಳುವ ಧಾಟಿಯಲ್ಲಿ ಚೂರು ಗೊಂದಲ ಅನಿಸುತ್ತೆ. ಮೇಲ್ನೋಟಕ್ಕೆ ಇದು ಲಾಜಿಕ್‌ ಅನಿಸಿದರೂ, ಹಿಂಗ್ಯಾಕಾಯ್ತು ಅನ್ನೋ ಫಿಲ್‌ ಬರುತ್ತೆ. ತೆರೆಮೇಲೆ ತೇಲಿ ಬರೋ ಹಾಡುಗಳಿಗೆ ಸರಿಯಾದ ಪ್ಲೇಸ್‌ಮೆಂಟ್‌ ಸಿಕ್ಕಿಲ್ಲ ಅನ್ನೋದು ಚಿತ್ರದ ಮೈನಸ್‌ ಪಾಯಿಂಟ್‌.

ಒಟ್ನಲ್ಲಿ ಮಾರ್ಕ್‌ ಸಿನಿಮಾ ವರ್ಥ್‌ ಟು ವಾಚ್‌. ಥ್ರಿಲ್ಲಿಂಗ್‌ ಎಲಿಮೆಂಟ್‌ಗಳ ಜತೆಗೆ ಎಂಟರ್‌ಟೈನಿಂಗ್‌ ಆಗಿತ್ತು. ಮಾರ್ಕ್‌ ಸಿನಿಮಾದಲ್ಲಿ ಸುದೀಪ್‌ ಅವ್ರನ್ನ ಹೊತ್ತು ಮೆರೆಸೋಕೆ ಸಾಕಷ್ಟು ಮೂಮೆಂಟ್‌ಗಳಿವೆ. ಧಮ್‌ ಹೊಡಿಯೋದ್‌ ಕಮ್ಮಿ ಮಾಡ್ಬೇಕಲೇ ಅನ್ನೋ ಡೈಲಾಗ್‌ಗೆ ಸೂಕ್ತ ಕಾರಣವನ್ನೂ ಕೊಟ್ಟಿದ್ದಾರೆ. ಇದಾಗಿತ್ತು ಮಾರ್ಕ್‌ ಸಿನಿಮಾ ರಿವ್ಯೂವ್‌.

Kiccha Sudeep mark kannada movie review mark movie mark movie 1st review mark movie audience review mark movie honest review mark movie public review mark movie review mark movie review in Kannada mark movie review Kannada mark movie reviews mark movie short review mark movie telugu review mark review mark the movie review Sandalwood ಕನ್ನಡ ಸಿನಿಮಾ ಸುದ್ದಿ ಸುದೀಪ್‌
Share. Facebook Twitter Pinterest LinkedIn Tumblr Email
Jagali Katte
  • Website

Related Posts

ಗಿಲ್ಲಿ ನಾಯಕನಾಗಿ ನಟಿಸಿರುವ `ಸೂಪರ್ ಹಿಟ್’ ಚಿತ್ರ ಫೆಬ್ರವರಿ 27ರಂದು ತೆರೆಗೆ!

February 10, 2026

ವೀರ ಕಂಬಳ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ!

February 10, 2026

Landlord Review: ದುನಿಯಾ ವಿಜಯ್-‌ ರಾಜ್‌ ಬಿ ಶೆಟ್ಟಿಯ ʻಲ್ಯಾಂಡ್‌ ಲಾರ್ಡ್‌ʼ ಸಿನಿಮಾ ಹೇಗಿದೆ?

January 23, 2026

‘ಕರಾವಳಿ’ಯಿಂದ ಬಂತು ಫಸ್ಟ್ ರೊಮ್ಯಾಂಟಿಕ್ ಮುದ್ದು ಗುಮ್ಮ

January 23, 2026
Add A Comment
Leave A Reply Cancel Reply

Editors Picks
Latest Posts

Subscribe to Updates

Get the latest sports news from SportsSite about soccer, football and tennis.

© 2026 Jagali Katte. Designed by Karnataka Best Digital Services.
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ

Type above and press Enter to search. Press Esc to cancel.