Close Menu
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ
What's Hot

ಗಿಲ್ಲಿ ನಾಯಕನಾಗಿ ನಟಿಸಿರುವ `ಸೂಪರ್ ಹಿಟ್’ ಚಿತ್ರ ಫೆಬ್ರವರಿ 27ರಂದು ತೆರೆಗೆ!

February 10, 2026

ವೀರ ಕಂಬಳ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ!

February 10, 2026

Landlord Review: ದುನಿಯಾ ವಿಜಯ್-‌ ರಾಜ್‌ ಬಿ ಶೆಟ್ಟಿಯ ʻಲ್ಯಾಂಡ್‌ ಲಾರ್ಡ್‌ʼ ಸಿನಿಮಾ ಹೇಗಿದೆ?

January 23, 2026
Facebook X (Twitter) Instagram
Facebook X (Twitter) Instagram
ಜಗಲಿ ಕಟ್ಟೆ
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ
ಜಗಲಿ ಕಟ್ಟೆ
Home»ಚಿತ್ರವಿಮರ್ಶೆ»Landlord Review: ದುನಿಯಾ ವಿಜಯ್-‌ ರಾಜ್‌ ಬಿ ಶೆಟ್ಟಿಯ ʻಲ್ಯಾಂಡ್‌ ಲಾರ್ಡ್‌ʼ ಸಿನಿಮಾ ಹೇಗಿದೆ?
ಚಿತ್ರವಿಮರ್ಶೆ

Landlord Review: ದುನಿಯಾ ವಿಜಯ್-‌ ರಾಜ್‌ ಬಿ ಶೆಟ್ಟಿಯ ʻಲ್ಯಾಂಡ್‌ ಲಾರ್ಡ್‌ʼ ಸಿನಿಮಾ ಹೇಗಿದೆ?

Jagali KatteBy Jagali KatteJanuary 23, 2026Updated:January 23, 2026No Comments3 Mins Read
WhatsApp Facebook Twitter LinkedIn Email Copy Link
ಲ್ಯಾಂಡ್‌ಲಾರ್ಡ್‌ ಸಿನಿಮಾ ಹೇಗಿದೆ?
Share
Facebook Twitter LinkedIn Pinterest Email

ಇಲ್ಲಿ ಹಸಿದ ಹೊಟ್ಟೆಗಿಂತ, ಹಳೇ ಹಗೆಯ ಉರಿನೇ ಜಾಸ್ತಿ! ಜಮೀನ್ದಾರಿ ಸಿಸ್ಟಮ್‌ಗೆ ಇವನೇ ಬಾಸ್.. ಆದ್ರೆ ಆ ಸಿಸ್ಟಮ್ ಅನ್ನೇ ನಡುಗಿಸೋಕೆ ಬರ್ತಿದ್ದಾನೆ ಒಬ್ಬ ಮಾಸ್! ದುನಿಯಾ ವಿಜಯ್ ಅಬ್ಬರಕ್ಕೆ, ರಾಜ್ ಬಿ. ಶೆಟ್ಟಿ ಸ್ವಾಗ್ ಸೇರಿದ್ರೆ ಹೇಗಿರುತ್ತೆ? ದಟ್ ಈಸ್ ‘ಲ್ಯಾಂಡ್ ಲಾರ್ಡ್’! ಹಾಗಾದ್ರೆ ಹೇಗಿದೆ ಲ್ಯಾಂಡ್‌ ಲಾರ್ಡ್‌ ಸಿನಿಮಾ? ಇದರ ಪ್ಲಸ್‌ ಏನು ಮೈನಸ್‌ ಏನು? ಜಡೇಶ್‌ ಹೆಣೆದ ಕಥೆ ವರ್ಕೌಟ್‌ ಆಯ್ತಾ? ಇದಲ್ಲದೆ ಸಿನಿಮಾದ ಔಟ್‌ ಅಂಡ್‌ ಔಟ್‌ ರಿವ್ಯೂವ್‌ ಇಲ್ಲಿದೆ.

ಏನಿದು ಲ್ಯಾಂಡ್‌ ಲಾರ್ಡ್‌ ಕಥೆ ಅನ್ನೋದನ್ನ ಮೊದಲು ನೋಡೋಣ. ಲ್ಯಾಂಡ್‌ ಲಾರ್ಡ್‌ ಕಥೆ ಓಪನ್‌ ಆಗೋದು 80ರ ದಶಕದ ಕೋಲಾರದ ಹಳ್ಳಿಯೊಂದರಲ್ಲಿ. ಇಲ್ಲಿ ‘ಲ್ಯಾಂಡ್ ಲಾರ್ಡ್’ ಅಂದ್ರೆ ಕೇವಲ ಜಮೀನಿನ ಮಾಲೀಕರಲ್ಲ, ಬದಲಿಗೆ ಇಡೀ ಊರನ್ನೇ ತನ್ನ ಹಿಡಿತದಲ್ಲಿಟ್ಕೊಂಡು ಜನ್ರನ್ನು ಜೀತದಾಳಾಗಿ ಮಾಡಿಕೊಂಡಿರೋ ಪಾಳೆಗಾರರು. ಈ ಕ್ರೂರ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಶಕ್ತಿ ‘ರಾಚಯ್ಯ’. ಶೋಷಿತರ ಪರವಾಗಿ ಬೆಂಗಾವಲಾಗಿ ನಿಲ್ಲುವ ರಾಚಯ್ಯನ ಹೋರಾಟ ಮತ್ತು ಒಬ್ಬ ಯುವ ಮಹಿಳಾ ಕಾನ್ಸ್ಟೇಬಲ್, ಶಿಕ್ಷಣದ ಮೂಲಕ ಈ ವ್ಯವಸ್ಥೆಯನ್ನು ಹೇಗೆ ಬದಲಿಸ್ತಾಳೆ ಅನ್ನೋದೇ ಚಿತ್ರದ ಎಳೆ.

ಇದನ್ನೂ ಓದಿ: Mark Review: ಆ 18 ಗಂಟೆ! ಕಿಚ್ಚ ಸುದೀಪ್‌ ನಟನೆಯ ʻಮಾರ್ಕ್‌ʼ ಸಿನಿಮಾ ಚಿತ್ರ ವಿಮರ್ಶೆ

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ‘ರೂಟೆಡ್’ ಸಿನಿಮಾಗಳ ಟ್ರೆಂಡ್ ಜೋರಾಗಿದೆ. ಮಣ್ಣಿನ ವಾಸನೆ ಮತ್ತು ಕಥೆಯ ಅಥೆಂಟಿಸಿಟಿಯನ್ನು ಕಾಪಾಡ್ಕೊಂಡು ಬರೋ ಸಿನಿಮಾಗಳ ಸಾಲಿಗೆ ಈಗ ಜಡೇಶ್ ಕೆ. ಹಂಪಿ ಡೈರೆಕ್ಟ್‌ ಮಾಡಿರೋ ‘ಲ್ಯಾಂಡ್ ಲಾರ್ಡ್’ ಸೇರ್ಪಡೆಯಾಗಿದೆ. ‘ಸಲಗ’ ಮತ್ತು ‘ಭೀಮ’ ಸಿನಿಮಾಗಳ ಯಶಸ್ಸಿನ ಬಳಿಕ, ವಿಜಯ್ ಇಲ್ಲಿ ಸಿರೀಯಸ್ ಮತ್ತು ಅಷ್ಟೇ ವೇಟೆಜ್‌ ಇರೋ ಪಾತ್ರದ ಮೂಲಕ ಎದುರಾಗಿದ್ದಾರೆ.

ಇಲ್ಲಿ ‘ಲ್ಯಾಂಡ್ ಲಾರ್ಡ್’ ಅಂದ್ರೆ ಕೇವಲ ಆಸ್ತಿ ಒಡೆಯನಲ್ಲ, ಹಿ ಈಸ್ ಎ ಡಿಕ್ಟೇಟರ್! ಜನರನ್ನು ಶೋಷಿಸೋ ಈ ವ್ಯವಸ್ಥೆಯ ಅಗೇನ್‌ಸ್ಟ್‌ ಬರೋನೇ ನಮ್ಮ ರಾಚಯ್ಯ. ಶೋಷಿತರ ಪರವಾಗಿ ಬೆಟ್ಟದಂತೆ ನಿಲ್ಲೋ ರಾಚಯ್ಯನ ರೋಲ್‌ನಲ್ಲಿ ದುನಿಯಾ ವಿಜಯ್ ಅವರದ್ದು ಕಂಪ್ಲೀಟ್ಲಿ ಡಿಫರೆಂಟ್ ಅಂಡ್ ಸೀರಿಯಸ್ ಪರ್ಫಾರ್ಮೆನ್ಸ್. ಇನ್ನು ಇವರ ಜೊತೆಗೆ ಒನ್ ಆಫ್ ದಿ ಮೋಸ್ಟ್ ಟ್ಯಾಲೆಂಟೆಡ್ ಆಕ್ಟರ್ ರಾಜ್ ಬಿ. ಶೆಟ್ಟಿ ಅವರ ಜುಗಲ್‌ಬಂದಿ ಚಿತ್ರದ ಮೇನ್ ಹೈಲೈಟ್. ರಾಜ್ ಶೆಟ್ಟಿ ಅವರ ಕೋಲಾರ ಸ್ಲ್ಯಾಂಗ್ ಅಂಡ್ ಸ್ವಾಗ್ ಸಿನಿಮಾಗೆ ಒಂದು ಅದ್ಭುತವಾದ ‘ವೈಬ್’ ತಂದುಕೊಟ್ಟಿದೆ. ತಮ್ಮ ವಿಶಿಷ್ಟ ಮ್ಯಾನರಿಸಂ ಮೂಲಕ ಇಡೀ ಚಿತ್ರಕ್ಕೆ ಒಂದು ಗತ್ತನ್ನು ತಂದುಕೊಟ್ಟಿದ್ದಾರೆ.

ಇದನ್ನೂ ಓದಿ: 45 Review: ತೆರೆಮೇಲೆ ಅಕ್ಷರಶಃ ಶಿವತಾಂಡವ, ಮೇಕಿಂಗ್‌ ಮೂಲಕವೇ ಮೈ ಜುಂ ಎನಿಸುವ ʻಜನ್ಯʼ

ಪರ್ಫಾರ್ಮೆನ್ಸ್ ವೈಸ್ ನೋಡಿದ್ರೆ, ರಚಿತಾ ರಾಮ್ ಅವರದ್ದು ತುಂಬಾ ನ್ಯಾಚುರಲ್ ಆಕ್ಟಿಂಗ್. ಉಮಾಶ್ರೀ ಅವರು ಅಲ್ಪ ಸಮಯ ಸ್ಕ್ರೀನ್ ಮೇಲೆ ಕಾಣಿಸಿಕೊಂಡ್ರೂ ತಮ್ಮ ಎಮೋಷನಲ್ ಆಕ್ಟಿಂಗ್ ಮೂಲಕ ಇಂಪ್ಯಾಕ್ಟ್ ಕ್ರಿಯೇಟ್ ಮಾಡ್ತಾರೆ. ಇನ್ನು ಡೈರೆಕ್ಟರ್ ಜಡೇಶ್ ಕೆ. ಹಂಪಿ ಅವರು ಒಂದು ದೊಡ್ಡ ತಾರಾಗಣವನ್ನ ಹ್ಯಾಂಡಲ್ ಮಾಡಿರೋ ರೀತಿ, ಮತ್ತು ಅವರ ಕಥೆಯಲ್ಲಿರೋ ಅಥೆಂಟಿಸಿಟಿ ಮೆಚ್ಚಲೇಬೇಕು.‌

ಟೆಕ್ನಿಕಲ್ ಡಿಪಾರ್ಟ್ಮೆಂಟ್ ವಿಷಯಕ್ಕೆ ಬಂದ್ರೆ, ಅಜನೀಶ್ ಲೋಕನಾಥ್ ಅವರ BGM ಅಲ್ಲಲ್ಲಿ ಬೇರೆ ಸಿನಿಮಾಗಳನ್ನ ನೆನಪಿಸಿದ್ರೂ, ಎಲಿವೇಶನ್ ಸೀನ್‌ಗಳಿಗೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತೆ. ಸ್ವಾಮಿ ಜೈ ಗೌಡ ಅವರ ಸಿನಿಮಾಟೋಗ್ರಫಿ, ಎಸ್ಪೆಶಲಿ ನೈಟ್ ಸೀನ್‌ಗಳಲ್ಲಿನ ವಿಷುವಲ್ಸ್ ತುಂಬಾ ರಿಚ್ ಆಗಿ ಮೂಡಿಬಂದಿವೆ. ಮಾಸ್ತಿ ಅವರ ಶಾರ್ಪ್ ಅಂಡ್ ಮೀನಿಂಗ್‌ಫುಲ್ ಡೈಲಾಗ್ಸ್ ಚಿತ್ರಕ್ಕೆ ಮೇಜರ್ ಪ್ಲಸ್ ಪಾಯಿಂಟ್.

ಅಫ್‌ಕೋರ್ಸ್, ಸಿನಿಮಾ ಸ್ವಲ್ಪ ಮಟ್ಟಿಗೆ ಪ್ರೆಡಿಕ್ಟಬಲ್ ಅಂತ ಅನ್ನಿಸಬಹುದು. ಸೆಕೆಂಡ್ ಹಾಫ್‌ನಲ್ಲಿ ಕೆಲವೊಂದು ಸೀನ್‌ಗಳು ರಿಪಿಟೇಟಿವ್ ಅನ್ಸಿದ್ರೂ, ಓವರ್‌ಆಲ್ ನಿರೂಪಣೆ ನಿಮ್ಮನ್ನ ಬೋರ್ ಮಾಡೋದಿಲ್ಲ. ಚಿತ್ರದ ಮೇಕಿಂಗ್ ಮತ್ತು ಮೆಸೇಜ್ ಆ ಕೊರತೆಯನ್ನು ನೀಗಿಸುತ್ತೆ. ಇಟ್ಸ್ ನಾಟ್ ಜಸ್ಟ್ ಎ ಕಮರ್ಷಿಯಲ್ ಸಿನಿಮಾ, ಇದೊಂದು ಅಪ್ಪಟ ಕನ್ನಡದ ರೂಟೆಡ್ ಸಿನಿಮಾ. ಒಟ್ಟಾರೆಯಾಗಿ ಹೇಳಬೇಕಂದ್ರೆ, ಆಕ್ಷನ್, ಎಮೋಷನ್ ಅಂಡ್ ಪವರ್‌ಫುಲ್ ಪರ್ಫಾರ್ಮೆನ್ಸ್ ಇರೋ ಈ ‘ಲ್ಯಾಂಡ್ ಲಾರ್ಡ್’, ಎವ್ರಿ ಸಿನಿಮಾ ಲವರ್‌ಗೆ ಒಂದು ಡೆಫಿನೇಟ್ ಗುಡ್ ವಾಚ್. ಸಣ್ಣಪುಟ್ಟ ಮಿತಿಗಳ ನಡುವೆಯೂ, ಚಿತ್ರಕಥೆ ಮತ್ತು ಪ್ರೆಸೆಂಟೇಶನ್‌ನಿಂದಾಗಿ ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಬಹುದು. ಇದು ನಮ್‌ ರಿವ್ಯೂವ್‌.

ರೇಟಿಂಗ್‌: 3.5\5

land lord kannada movie review land lord movie public review land lord movie review land lord movie review in kannada land lord movie reviews landlord kannada movie public review landlord kannada movie review landlord movie landlord movie honest review landlord movie interview landlord movie public review landlord movie review landlord movie review kannada landlord movie story review landlord movie trailer review landlord review review landlord
Share. Facebook Twitter Pinterest LinkedIn Tumblr Email
Jagali Katte
  • Website

Related Posts

ಗಿಲ್ಲಿ ನಾಯಕನಾಗಿ ನಟಿಸಿರುವ `ಸೂಪರ್ ಹಿಟ್’ ಚಿತ್ರ ಫೆಬ್ರವರಿ 27ರಂದು ತೆರೆಗೆ!

February 10, 2026

ವೀರ ಕಂಬಳ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ!

February 10, 2026

‘ಕರಾವಳಿ’ಯಿಂದ ಬಂತು ಫಸ್ಟ್ ರೊಮ್ಯಾಂಟಿಕ್ ಮುದ್ದು ಗುಮ್ಮ

January 23, 2026

Mark Review: ಆ 18 ಗಂಟೆ! ಕಿಚ್ಚ ಸುದೀಪ್‌ ನಟನೆಯ ʻಮಾರ್ಕ್‌ʼ ಸಿನಿಮಾ ಚಿತ್ರ ವಿಮರ್ಶೆ

December 27, 2025
Add A Comment
Leave A Reply Cancel Reply

Editors Picks
Latest Posts

Subscribe to Updates

Get the latest sports news from SportsSite about soccer, football and tennis.

© 2026 Jagali Katte. Designed by Karnataka Best Digital Services.
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ

Type above and press Enter to search. Press Esc to cancel.