Close Menu
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ
What's Hot

ಗಿಲ್ಲಿ ನಾಯಕನಾಗಿ ನಟಿಸಿರುವ `ಸೂಪರ್ ಹಿಟ್’ ಚಿತ್ರ ಫೆಬ್ರವರಿ 27ರಂದು ತೆರೆಗೆ!

February 10, 2026

ವೀರ ಕಂಬಳ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ!

February 10, 2026

Landlord Review: ದುನಿಯಾ ವಿಜಯ್-‌ ರಾಜ್‌ ಬಿ ಶೆಟ್ಟಿಯ ʻಲ್ಯಾಂಡ್‌ ಲಾರ್ಡ್‌ʼ ಸಿನಿಮಾ ಹೇಗಿದೆ?

January 23, 2026
Facebook X (Twitter) Instagram
Facebook X (Twitter) Instagram
ಜಗಲಿ ಕಟ್ಟೆ
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ
ಜಗಲಿ ಕಟ್ಟೆ
Home»ಚಿತ್ರವಿಮರ್ಶೆ»The Devil Review: ʻಡೆವಿಲ್‌ʼ ಜಾತ್ರೆಯಲ್ಲಿ ಉತ್ಸವ ಮೂರ್ತಿಗಷ್ಟೇ ಸಿಂಗಾರ ಸಾಕಾ? ʻದಿ ಡೆವಿಲ್‌ʼ ಸಿನಿಮಾ ವಿಮರ್ಶೆ
ಚಿತ್ರವಿಮರ್ಶೆ

The Devil Review: ʻಡೆವಿಲ್‌ʼ ಜಾತ್ರೆಯಲ್ಲಿ ಉತ್ಸವ ಮೂರ್ತಿಗಷ್ಟೇ ಸಿಂಗಾರ ಸಾಕಾ? ʻದಿ ಡೆವಿಲ್‌ʼ ಸಿನಿಮಾ ವಿಮರ್ಶೆ

Jagali KatteBy Jagali KatteDecember 11, 2025Updated:December 11, 2025No Comments3 Mins Read
WhatsApp Facebook Twitter LinkedIn Email Copy Link
ಡೆವಿಲ್‌ ಸಿನಿಮಾ ವಿಮರ್ಶೆ
Share
Facebook Twitter LinkedIn Pinterest Email

ಚಿತ್ರ – ದಿ ಡೆವಿಲ್
ನಿರ್ಮಾಪಕರು – ಶ್ರೀ ಜೈಮಾತಾ ಕಂಬೈನ್ಸ್
ನಿರ್ದೇಶನ –  ಪ್ರಕಾಶ್
ಛಾಯಾಗ್ರಹಣ –  ಸುಧಾಕರ್ ಎಸ್.‌ ರಾಜ್
ಸಂಗೀತ – B. ಅಜನೀಶ್ ಲೋಕನಾಥ್
ಸಂಕಲನ – ಹರೀಶ್ ಕೊಮ್ಮೆ

ಕಲಾವಿದರು :- ದರ್ಶನ್, ಶರ್ಮಿಳಾ ಮಾಂಡ್ರೆ, ಶೋಭರಾಜ್, ಅಚ್ಯುತ್ ಕುಮಾರ್, ಮಹೇಶ್ ಮಾಂಜ್ರೇಕರ್, ರಚನಾ ರಾಯ್, ವಿನಯ್ ಗೌಡ, ಮುಂತಾದವರು.

ಈ ವರ್ಷದ Most Expected ಸಿನಿಮಾಗಳಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವ್ರ ದಿ ಡೆವಿಲ್‌ ಸಹ ಒಂದು. ಇದೀಗ ಈ ಸಿನಿಮಾ ಅಷ್ಟೇ ಗ್ರ್ಯಾಂಡ್‌ ಆಗಿ ಥಿಯೇಟರ್ಸ್‌ಗೆ ಎಂಟ್ರಿ ಕೊಟ್ಟಿದೆ. ಈಗ ನೇರವಾಗಿ ವಿಷ್ಯಕ್ಕೆ ಬಂದು ಬಿಡ್ತೀನಿ. ಈ ಸಿನಿಮಾ ಹೇಗಿದೆ? ಪ್ಲಸ್‌ ಏನು? ಮೈನಸ್‌ ಏನು? ಯಾವುದು ವರ್ಕ್‌ ಆಗಲಿಲ್ಲ ಅದೆಲ್ಲದ್ರ ಬಗ್ಗೆ ಡಿಟೇಲ್ಡ್‌ ಆಗಿಯೇ ಮಾತಾಡೋಣ.  

ಡೆವಿಲ್‌ ಸಿನಿಮಾದಲ್ಲಿ ಸಿಎಂ ರಾಜಶೇಖರ್‌, ಕರೆಪ್ಶನ್‌ ಆರೋಪದ ಮೇಲೆ ಜೈಲು ಸೇರ್ತಾರೆ. ಅದೇ ಸಿಎಂ ಕುರ್ಚಿ ಮೇಲೆ ಹಲವರ ಕಣ್ಣು ಬೀಳುತ್ತೆ. ಹೀಗಿರುವಾಗ, ಆ ಕುರ್ಚಿ ಮೇಲೆ ಕೂರೋರ್‌ ಯಾರು? ಅಲ್ಲಿರೋ ಚಾಲೆಂಜಸ್‌ಗಳೇನು? ಅಷ್ಟೇ ಅಲ್ಲ ಈ ಧನುಷ್‌ ಅಲಿಯಾಸ್‌ ಡೆವಿಲ್‌ ಯಾರು? ಇದೆಲ್ಲದಕ್ಕೂ ಸಿನಿಮಾದಲ್ಲಿಯೇ ಉತ್ತರ ಸಿಗ್ತಾ ಹೋಗುತ್ತೆ.  

ಡೈರೆಕ್ಟರ್‌ ಪ್ರಕಾಶ್‌ ವೀರ್‌ ಒಳ್ಳೆಯ ಸಬ್ಜೆಕ್ಟ್‌ ಅನ್ನೇ ಆಯ್ಕೆ ಮಾಡ್ಕೊಂಡಿದ್ದಾರೆ. ಪೊಲಿಟಿಕಲ್‌ ಹಿನ್ನೆಲೆ ಇರೋದ್ರಿಂದ ಸಾಕಷ್ಟು ಟ್ವಿಸ್ಟ್‌ಗಳು ನೋಡೋಕೆ ಸಿಗ್ತವೆ. ಒಳ್ಳೆಯ ಬ್ಯಾಕ್‌ಡ್ರಾಪ್‌ ಜೊತೆಗೆ ಹೈಡ್ರಾಮಾ ಸಹ ಇಲ್ಲಿ ಕಾಣುತ್ತೆ. ಹೊಡಿ ಬಡಿ ಆಟದ ಜೊತೆಗೆ, ನಾಯಕನಿಗೆ ಎಲ್ಲವೂ ಈಸಿಯಾಗಿ ಸಿಕ್ಕರೆ, ಸಿನಿಮಾ ಟೇಸ್ಟ್‌ ಅನಿಸುತ್ತಾ? ರುಚಿಸಲ್ಲ ಅಲ್ವಾ? ಅದಕ್ಕೆ ಅಂತಾನೇ ನಿರ್ದೇಶಕರು ಬೇರೆ ಥರದಲ್ಲಿ ನರೇಷನ್‌ ಸೆಟ್‌ ಮಾಡಿದ್ದಾರೆ.

ಸಿನಿಮಾದ ಮೇನ್‌ ಪಿಲ್ಲರ್‌, ದರ್ಶನ್‌ ಅವರನ್ನು ಡಿ ಡೆವಿಲ್‌ ಸಿನಿಮಾದಲ್ಲಿ ಸಕತ್‌ ಸ್ಟೈಲಿಶ್‌ ಆಗಿ ನೋಡಬಹುದು. ಫಸ್ಟ್‌ ಹಾಫ್‌ನಲ್ಲಿ ಡಿಫರೆಂಟ್‌ ಗೆಟಪ್‌ಗಳಲ್ಲಿ ಕಂಡಿದ್ದ ದರ್ಶನ್‌, ಸೆಕೆಂಡ್‌ ಹಾಫ್‌ನಲ್ಲಿನ ಚೇಂಜ್‌ ಓವರ್‌ ಕ್ಯೂರಿಯಾಸಿಟಿ ಮೂಡಿಸುತ್ತೆ. ಪ್ರೀ ಇಂಟರ್‌ವಲ್‌ ಅಷ್ಟೊತ್ತಿಗೆ ಸಿನಿಮಾ ಮೇನ್‌ ಸ್ಟೋರಿಗೆ ಟೇಕ್‌ ಆಫ್‌ ಆಗುತ್ತೆ. ದರ್ಶನ್‌ ಹಿಂಗ್ಯಾಕಾದ್ರು ಅಂತ ನಿಮಗೆ ಕನ್‌ಫ್ಯೂಸ್‌ ಆಗ್ತಾ ಹೋಗುತ್ತೆ. ಕ್ಷಣ ಕ್ಷಣಕ್ಕೂ ಬದಲಾಗ್ತಾರೆ. ಗಳಿಗೆಗೊಂದು ವೇಷವೂ ಚೇಂಜ್‌ ಆಗ್ತಿರತ್ತೆ. ಪಕ್ಕ ಕಮರ್ಷಿಯಲ್‌ ಜಾನರ್‌ನಲ್ಲಿರೋ ಈ ಡೆವಿಲ್‌, ದರ್ಶನ್‌ ಅವ್ರ ಫ್ಯಾನ್ಸ್‌ಗೆ ಹೇಳಿ ಮಾಡಿಸಿದ ಟ್ರೀಟ್‌.

ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿರೋದು ನಟ ದರ್ಶನ್‌. ಅವ್ರನ್ನು ಒನ್‌ ಮ್ಯಾನ್‌ ಆರ್ಮಿ ಅಂತ ಹೇಳ್ಬಹುದು. ಇಡೀ ಸಿನಿಮಾಕ್ಕೆ ಮೇಜರ್‌ ಟ್ವಿಸ್ಟ್‌ ಸಿಗೋದು ಸಹಿತ ಅದೇ ಡೆವಿಲ್‌ ಪಾತ್ರದ ಮೂಲಕ. ಸ್ಕ್ರೀನ್‌ ಮೇಲೆ ದರ್ಶನ್‌ ಅವರ ರೌದ್ರಾವತಾರ ಕಣ್ತುಂಬಿಕೊಳ್ಳೊದೇ ಒಂದು ಗ್ರ್ಯಾಂಡ್‌ನೆಸ್‌. ತೆರೆಮೇಲೆ ಅಷ್ಟೊಂದು ಡಾಮಿನೇಟ್‌ ಮಾಡಿದ್ದಾರವರು.

ಚಿತ್ರದಲ್ಲಿ ದೊಡ್ಡ ಸ್ಟಾರ್‌ ಕಾಸ್ಟ್‌ ಇದ್ರೂ, ದರ್ಶನ್‌ ಅವ್ರನ್ನೇ ಮೆರೆಸಲಾಗಿದೆ. ಹಿನ್ನೆಲೆ ಸಂಗೀತ ಮತ್ತು ಹಾಡುಗಳ ವಿಚಾರದಲ್ಲಿ ಮ್ಯೂಸಿಕ್‌ ಡೈರೆಕ್ಟರ್‌ ಅಜನೀಶ್‌ ಲೋಕನಾಥ್‌, ಮೋಸ ಮಾಡಲ್ಲ. ಮೇಕಿಂಗ್‌ ವಿಚಾರದಲ್ಲಿ ನಿರ್ಮಾಪಕರು ಕೈ ಬಿಚ್ಚಿ ಖರ್ಚು ಮಾಡಿದ್ದು ಎದ್ದು ಕಾಣುತ್ತೆ. ಕ್ಯಾಮರಾಮನ್‌ ಅವ್ರ ಫ್ರೇಮ್‌ ಸಖತ್‌ ಕಲರ್‌ಫುಲ್‌ ಆಗಿದೆ. ಪ್ರತಿ ಸೀನ್‌ಗಳು ರಿಚ್‌ ಆಗಿಯೇ ಕಾಣಿಸುತ್ವೆ. ಆದರೆ, ಕಥೆನೇ ಗಟ್ಟಿಯಾಗಿಲ್ಲ ಅಂದ್ರೆ ಹೇಗೆ ಗುರೂ!

ಹೌದು, ಇದಿಷ್ಟು ಡೆವಿಲ್‌ ಒನ್‌ ಸೈಡ್‌ ಸ್ಟೋರಿ. ಇದೀಗ ಇದೇ ಚಿತ್ರದ ನೆಗೆಟಿವ್‌ ಬಗ್ಗೆ ಹೇಳ್ತೀವ್‌ ಕೇಳಿ. ಊರ ಜಾತ್ರೆ ಅನ್ನೋ ಕಾರಣಕ್ಕೆ, ಬರೀ ತೇರನ್ನೇ, ಅದರಲ್ಲಿರೋ ಉತ್ಸವ ಮೂರ್ತಿಯನ್ನಷ್ಟೇ ಸಿಂಗಾರ ಮಾಡಿದ್ರೆ ಸಾಕಾ? ಇಲ್ಲ ಊರನ್ನೂ ಅಲಂಕರಿಸಬೇಕು. ಅದೇ ರೀತಿ ಡೇವಿಲ್‌ ಸಿನಿಮಾದಲ್ಲಿ ದರ್ಶನ್‌ ಅವ್ರನ್ನಷ್ಟೇ Concentrate ಮಾಡಿದಂತಿದೆ. ಬರವಣಿಗೆ ವಿಚಾರದಲ್ಲಿ ಸಿನಿಮಾ ತುಂಬ ಸಪ್ಪೆ ಅನಿಸುತ್ತೆ.

ರಾಜಕೀಯ ಅನ್ನೋ ವಿಷ್ಯವೇ ಡೆವಿಲ್‌ ಸಿನಿಮಾದ ಹೈಲೈಟ್.‌ ಆದರೆ, ಆ ಪೊಲಿಟಿಕಲ್ ಸೀರಿಯಸ್‌ನೆಸ್‌ ಸಿನಿಮಾದಲ್ಲಿ ಕಾಣಿಸೋದೇ ಇಲ್ಲ. ಪಾತ್ರಗಳು ಹೀಗೆ ಬರ್ತಾವೆ, ಹಾಗೆ ಹೋಗ್ತಾವೆ. ಆದ್ರೆ, ದರ್ಶನ್‌ ಅವರನ್ನು ಹೊರತುಪಡಿಸಿ ಒಂದೇ ಒಂದು ಪಾತ್ರಕ್ಕೂ ಗಟ್ಟಿತನವಿಲ್ಲ. ಕೊನೇ ವರೆಗೂ ಕಾಡುವ ಪಾತ್ರಗಳಿಲ್ಲ. ಅಬ್ಬರದ ಡೈಲಾಗ್‌ಗಳಿಗೇನೂ ಕೊರತೆ ಇಲ್ಲ. ಆದರೆ, ಪ್ರೇಕ್ಷಕ ಬಯಸೋ ಕಡೆ ಆ ಡೈಲಾಗ್‌ ಕೇಳಿ ಬರಲ್ಲ. ಆರಡಿ ದರ್ಶನ್‌ ಅವರನ್ನಷ್ಟೇ ಮೆರೆಸಿರೋ ನಿರ್ದೇಶಕರು, ಅವರೊಳಗಿನ ಆಕ್ಟಿಂಗ್‌ ಹಸಿವನ್ನು ಬಳಸಿಕೊಳ್ಳೋಕೆ ಫೇಲ್‌ ಆಗಿದ್ದಾರೆ. ಟ್ರೇಲರ್‌ ನೋಡ್ದಾಗ ಇದ್ದ ಫೀಲ್‌ ಸಿನಿಮಾ ನೋಡಿದ ಮೇಲೆ ಇಲ್ವೇ ಇಲ್ಲ ಅನ್ಬಹುದು.

ಇನ್ನ ಡ್ಯೂಲ್‌ ಶೇಡ್‌ನಲ್ಲಿ ಕಾಣಿಸಿರೋ ದರ್ಶನ್‌, ಡೆವಿಲ್‌ ಪಾತ್ರದ ಗತ್ತಿಗೆ ತಕ್ಕಂತೆ ಇನ್ನಷ್ಟು ಮೋಲ್ಡ್‌ ಆಗಬೇಕಿತ್ತು. ಬದಲಿಗೆ, ಅವ್ರ ನಟನೆ ಆರ್ಟಿಫಿಶಿಯಲ್‌ ಅನಿಸುತ್ತೆ. ಫ್ರೇಮ್‌ ಬೈ ಫ್ರೇಮ್‌ ಸಖತ್‌ ಕ್ಲಾಸಿ ಆಗಿದ್ರೂ, ವಿಎಫ್‌ಎಕ್ಸ್‌ ಪೂವರ್‌ ಅನಿಸುತ್ತೆ. ಹಾಗಾಗಿ ಇದೇನೂ ತೀರಾ ಹೌದೌದು ಅನ್ನೋವಂಥ ಸಿನಿಮಾ ಏನಲ್ಲ. ಒಂದು ಲೆಕ್ಕಕ್ಕೆ ಎವರೇಜ್‌ ಸಿನಿಮಾ. ಡೆವಿಲ್‌ ಮೇಲೆ ಎಕ್ಸ್‌ಪೆಕ್ಟೇಷನ್‌ ಜಾಸ್ತಿ ಇತ್ತು. ಆದ್ರೆ, ಸಿನಿಮಾ ನೋಡಿದ ಮೇಲೆ ಎಲ್ಲವೂ ಬಿದ್ದೋಯ್ತು. ಇದು ನಮ್‌ ರಿವ್ಯೂವ್.‌

Challenging Star Darshan Darshan Darshan Kannada Movie darshan movie Darshan Movie news Devil Movie devil updates Kannada Cinema Kannada Movies 2025 Rachana Rai Sandalwood the devil hit or flop the devil Kannada Movie review the devil review
Share. Facebook Twitter Pinterest LinkedIn Tumblr Email
Jagali Katte
  • Website

Related Posts

ಗಿಲ್ಲಿ ನಾಯಕನಾಗಿ ನಟಿಸಿರುವ `ಸೂಪರ್ ಹಿಟ್’ ಚಿತ್ರ ಫೆಬ್ರವರಿ 27ರಂದು ತೆರೆಗೆ!

February 10, 2026

ವೀರ ಕಂಬಳ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ!

February 10, 2026

Landlord Review: ದುನಿಯಾ ವಿಜಯ್-‌ ರಾಜ್‌ ಬಿ ಶೆಟ್ಟಿಯ ʻಲ್ಯಾಂಡ್‌ ಲಾರ್ಡ್‌ʼ ಸಿನಿಮಾ ಹೇಗಿದೆ?

January 23, 2026

‘ಕರಾವಳಿ’ಯಿಂದ ಬಂತು ಫಸ್ಟ್ ರೊಮ್ಯಾಂಟಿಕ್ ಮುದ್ದು ಗುಮ್ಮ

January 23, 2026
Add A Comment
Leave A Reply Cancel Reply

Editors Picks
Latest Posts

Subscribe to Updates

Get the latest sports news from SportsSite about soccer, football and tennis.

© 2026 Jagali Katte. Designed by Karnataka Best Digital Services.
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ

Type above and press Enter to search. Press Esc to cancel.