Author: Jagali Katte

ಸಾರಥಿ ಫಿಲಂಸ್ ಲಾಂಛನದಲ್ಲಿ ಕೆ.ವಿ. ಸತ್ಯಪ್ರಕಾಶ್ – ಹೇಮಂತ್ ಗೌಡ ಕೆ.ಎಸ್ ನಿರ್ಮಿಸಿರುವ, ಜಡೇಶ್ ಕೆ.ಹಂಪಿ ನಿರ್ದೇಶನದ ಹಾಗೂ ದುನಿಯಾ ವಿಜಯ್, ರಚಿತರಾಮ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಚಿತ್ರದ ಸರ್ವೈವರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಜನಮನಸೂರೆಗೊಂಡಿದೆ. ಈಗ ಈ ಚಿತ್ರದ “ದಿ ರೂಲರ್” ಟೀಸರ್ ಬಿಡುಗಡೆಯಾಗಿದೆ‌. “ದಿ ರೂಲರ್” ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಅಭಿನಯಿಸಿದ್ದಾರೆ. ಇದು ರಾಜ್ ಬಿ ಶೆಟ್ಟಿ ಅವರ ಪಾತ್ರ ಪರಿಚಯದ ಟೀಸರ್ ಆಗಿದೆ. “ದಿ ರೂಲರ್” ಟೀಸರ್ ನೋಡಿದ ರಾಜ್ ಬಿ ಶೆಟ್ಟಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಬಹು ನಿರೀಕ್ಷಿತ ಈ ಚಿತ್ರ 2026ರ ಜನವರಿ 23 ರಂದು ಬಿಡುಗಡೆಯಾಗುತ್ತಿದೆ. ಟೀಸರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಖಳನ ಪಾತ್ರದ ಬಗ್ಗೆ ರಾಜ್‌ ಬಿ ಶೆಟ್ಟಿ ಹೇಳಿದ್ದೇನು? ನಾನು ಈ ಚಿತ್ರ ಒಪ್ಪಿಕೊಳ್ಳಲು ಮೊದಲ ಕಾರಣ ನಿರ್ದೇಶಕ ಜಡೇಶ್ ಅವರು‌ ಎಂದು ಮಾತನಾಡಿದ ನಟ ರಾಜ್…

Read More

ʻಜವರʼ, ಸ್ಯಾಂಡಲ್‌ವುಡ್‌ನಲ್ಲಿ ಸೆಟ್ಟೇರಿದ ಹೊಸ ಸಿನಿಮಾ… ʻಆಪರೇಷನ್ ಅಲಮೇಲಮ್ಮʼ ಖ್ಯಾತಿಯ ನಟ ರಿಷಿ ಹಾಗೂ ದುನಿಯ ವಿಜಯ್ ಅವರ ಮೊದಲ ಪುತ್ರಿ ರಿತನ್ಯಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ ʻಜವರʼ. ʻಯಲಾ ಕುನ್ನಿʼ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರದೀಪ್ ದಳವಾಯ್ ಸಾರಥ್ಯದಲ್ಲಿ ಮೂಡಿಬರುತ್ತಿದ್ದು, ಚಿದಾವೃಷಭ ಅವರು ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ʻಜವರʼ ಸಿನಿಮಾದ ಮುಹೂರ್ತ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿಅದ್ದೂರಿಯಾಗಿ ನೆರವೇರಿತು. ʻಜವರʼ ಟೈಟಲ್ ಕೇಳಿದ್ರೆ ಮೈ ಜುಮ್ ಎನ್ನುವಂತಿದೆ. ಮಾಸ್ ಟೈಟಲ್ ರಿವೀಲ್ ಮಾಡುವ ಜೊತೆಗೆ ಚಿತ್ರೀಕರಣಕ್ಕೆ ಚಾಲನೆ ಕೂಡ ಸಿಕ್ಕಿದೆ. ಸ್ಮಶಾನದಲ್ಲಿ ಶವಗಳನ್ನು ಹೂಳುವ ಕೆಲಸ ಮಾಡುತ್ತಿರುವ ನೀಲಮ್ಮ ʻಜವರʼ ಸಿನಿಮಾಗೆ ಕ್ಲಾಪ್ ಮಾಡಿದ್ದು ವಿಶೇಷವಾಗಿತ್ತು. ಸಿನಿಮಾದ ವಿಶೇಷ ಪಾತ್ರಗಳಲ್ಲಿ ಹಿರಿಯ ನಟ ರಂಗಾಯಣ ರಘು ಮತ್ತು ನಟಿ ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ರಂಗಾಯಣ ರಘು, ಈ ಸಿನಿಮಾದಲ್ಲಿ ಗೌರಿ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ರಂಗಾಯಣ ರಘು ಅವರು ಶ್ರುತಿ ಅವರ ಜೊತೆ ಮತ್ತೆ ನಟಿಸುತ್ತಿದ್ದೀನಿ.…

Read More

ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ನಿರ್ದೇಶನದ ಹಾಗೂ ಸೂರಜ್ ಪ್ರೊಡಕ್ಷನ್ ಲಾಂಛನದಲ್ಲಿ ರಮೇಶ್ ರೆಡ್ಡಿ ಅವರು ನಿರ್ಮಿಸಿರುವ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಮಲ್ಟಿಸ್ಟಾರರ್ “45” ಚಿತ್ರ ಡಿಸೆಂಬರ್ 25 ಕ್ರಿಸ್ಮಸ್ ದಿನದಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಡಿಸೆಂಬರ್ 15 ರಂದು ಟ್ರೇಲರ್ ಅನಾವರಣವಾಗಲಿದೆ. ಟ್ರೇಲರ್ ಬಿಡುಗಡೆ ಸಮಾರಂಭವನ್ನು ವಿಭಿನ್ನವಾಗಿ ಅಯೋಜಿಸಲು ಚಿತ್ರತಂಡ ನಿರ್ಧರಿಸಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ, ನಿರ್ದೇಶಕ ಅರ್ಜುನ್ ಜನ್ಯ ಟ್ರೇಲರ್ ಇವೆಂಟ್ ಬಗ್ಗೆ ಮಾಹಿತಿ ನೀಡಿದರು‌. ಇವೆಂಟ್ ಮ್ಯಾನೇಜ್ಮೆಂಟ್ ನ ನವರಸನ್ ಅವರು ಉಪಸ್ಥಿತರಿದ್ದರು. ಇದನ್ನೂ ಓದಿ: ಕಮರ್ಶಿಯಲ್‌ ಧಾಟಿಯ ʻಸೂಪರ್‌ ಹಿಟ್‌ʼ ಚಿತ್ರದಲ್ಲಿ ಹಾಸ್ಯವೇ ಪ್ರಧಾನ; ನಾಯಕನಾದ ಗಿಲ್ಲಿ ನಟಡಿಸೆಂಬರ್ 15ಕ್ಕೆ ಟ್ರೇಲರ್‌ ಬಿಡುಗಡೆನಮ್ಮ “45” ಚಿತ್ರದ ಟ್ರೇಲರ್ ರಿಲೀಸ್ ಇವೆಂಟ್ ಡಿಸೆಂಬರ್ 15 ರಂದು…

Read More

ವೀಕ್ಷಕರು ಇಷ್ಟಪಡುವಂತಹ ಧಾರಾವಾಹಿಗಳನ್ನು ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣದಲ್ಲಿ ಇದೀಗ ಹೊಸ ಧಾರಾವಾಹಿ ‘ಜೈ ಲಲಿತಾ’ ಸೇರ್ಪಡೆಯಾಗುತ್ತಿದೆ. ಶ್ರೀ ಭ್ರಾಮರೀ ಕ್ರಿಯೇಶನ್ಸ್ ಅಡಿಯಲ್ಲಿ ಶ್ರೀನಿಧಿ ನಿರ್ಮಾಣ ಮಾಡುತ್ತಿದ್ದು ದರ್ಶಿತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಡಿಸೆಂಬರ್ 8ರಿಂದ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗಲು ಸಜ್ಜಾಗಿದೆ. ಕಥೆಯ ಕುರಿತು ಹೇಳುವುದಾದರೆ ಭೈರವಪುರ ಹಳ್ಳಿಯ ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದಿರೋ ಲಲಿತಾ, ಅಪ್ಪನಿಗೆ ಮುದ್ದಿನ ಪುತ್ರಿಯಾದರೆ, ಊರಿನವರಿಗೆ ಮನೆ ಮಗಳು. ಅದೇ ಊರಿನ ರಾಜಕಾರಣಿ ದೇವರಾಜ್ ಚಕ್ರವರ್ತಿ ಎರಡನೇ ಮಗ ಜೈರಾಜ್ ತನಗನಿಸಿದನ್ನೇ ಮಾಡೋ ಶೂರ. ಅಚಾನಕ್ ಆಗಿ ರಾಜಕೀಯಕ್ಕೆ ಎಂಟ್ರಿ ಕೊಡುವ ಲಲಿತಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷೆಯಾಗುತ್ತಾಳೆ. ಮುಂದೆ ದೇವರಾಜ್ ಚಕ್ರವರ್ತಿ ಮಗನಿಗೆ ಇಷ್ಟವಿಲ್ಲದಿದ್ದರೂ ಸ್ವಾರ್ಥಕ್ಕಾಗಿ ಲಲಿತಾಳನ್ನು ಸೊಸೆಯನ್ನಾಗಿ ಮಾಡಿಕೊಳ್ತಾನೆ. ನಂತರ ಆಕೆಯ ನಡೆ ಎಲ್ಲಿಗೆ ಕರೆದುಕೊಂಡು ಹೋಗುತ್ತದೆ. ಮದುವೆಯೇ ಕನಸಾಗಿದ್ದವಳಿಗೆ ಮದುವೆಯ ಜೀವನ ಮುಳ್ಳಿನಂತಾಗುತ್ತಾ? ಊರನ್ನೇ ಗೆದ್ದವಳು ಅತ್ತೆಯ ಮನಸ್ಸನ್ನು ಗೆದ್ದು ಚಕ್ರವರ್ತಿ ಮನೆತನದ ಸೊಸೆ ಸ್ಥಾನವನ್ನು ಪಡೆದುಕೊಳ್ತಾಳ? ಆಕೆಯ ಮುಗ್ದತೆಗೆ ಕರಗಿ…

Read More

Super hit Kannada Movie: ಕಾಮಿಡಿ ಶೋಗಳ ಮೂಲಕ ಪ್ರವರ್ಧಮಾನಕ್ಕೆ ಬಂದು, ಇದೀಗ ಬಿಗ್ ಬಾಸ್ ಶೋನಲ್ಲಿಯೂ ಸ್ಪರ್ಧಿಯಾಗಿ ಮಿಂಚುತ್ತಿರುವವರು ಗಿಲ್ಲಿ ನಟ. ಗಿಲ್ಲಿ ನಾಯಕನಾಗಿ ನಟಿಸಿರುವ ಸೂಪರ್ ಹಿಟ್ ಚಿತ್ರವೀಗ ಬಿಡುಗಡೆಗೆ ತಯಾರಾಗಿ ನಿಂತಿದೆ. ವಿಜಯಾನಂದ್ ನಿರ್ದೇಶನದ ಈ ಸಿನಿಮಾದ ಟೀಸರ್ ಇದೀಗ ಬಿಡುಗಡೆಗೊಂಡಿದೆ. ಈ ಕುರಿತಾದ ಪತ್ರಿಕಾಗೋಷ್ಠಿಯ ಮೂಲಕ ಚಿತ್ರತಂಡ ಒಟ್ಟಾರೆ ಸಿನಿಮಾದ ಬಗೆಗಿನ ಒಂದಷ್ಟು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದೆ. ಹೀಗೆ ಬಿಡುಗಡೆಗೊಂಡಿರುವ `ಸೂಪರ್ ಹಿಟ್’ ಟೀಸರ್ ಸು ಫ್ರಂ ಸೋ ನಂತರದಲ್ಲಿ ಮತ್ತೊಂದು ಮಟ್ಟದ ಕಾಮಿಡಿಯ ಮೂಲಕ ಸಂಚಲನ ಸೃಷ್ಟಿಸುವ ಲಕ್ಷಣಗಳು ದಟ್ಟವಾಗಿ ಕಾಣಿಸುತ್ತಿವೆ. ಸಿನಿಮಾವೊಂದು ಬಿಡುಗಡೆಯಾದ ನಂತರ ಸೂಪರ್ ಹಿಟ್ ಆಗೋದು ವಾಡಿಕೆ. ಆದರೆ, ಈ ಸಿನಿಮಾದ ಶೀರ್ಷಿಕೆಯೇ ಸೂಪರ್ ಹಿಟ್. ರನ್ನಿಂಗ್ ಸಕ್ಸಸ್‌ಫುಲಿ ಎಂಬ ಟ್ಯಾಗ್ ಲೈನ್ ಅದಕ್ಕಿದೆ. ಹೀಗೆ ಶೀರ್ಷಿಕೆಯ ಮೂಲಕವೇ ಗಮನ ಸೆಳೆದಿದ್ದ ಈ ಸಿನಿಮಾದ ಟೈಟಲ್ಲು ಹುಟ್ಟಿದ ಬಗೆಗಿನ ಇಂಟರೆಸ್ಟಿಂಗ್ ಸಂಗತಿಯನ್ನು ನಿರ್ದೇಶಕ ವಿಜಯಾನಂದ ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ಒಂದಷ್ಟು…

Read More

ಈಗಾಗಲೇ ಟೀಸರ್ ನಿಂದ ಕುತೂಹಲ ಕೆರಳಿಸಿರುವ ಸೂಪರ್ ನ್ಯಾಚುರಲ್ ಥ್ರಿಲ್ಲರ್ – ʻದೈಜಿʼ ಸಿನೆಮಾ ತಂಡವು ಮಹತ್ತರವಾದ ಚಿತ್ರೀಕರಣ ಒಂದನ್ನು ಭಾರತದ ಅತ್ಯಂತ ಪ್ರಾಚೀನ, ಅಧ್ಯಾತ್ಮಿಕ ನಗರವಾದ ವಾರಣಾಸಿಯಲ್ಲಿ ಚಿತ್ರೀಕರಿಸಿಕೊಂಡು ಹಿಂದಿರುಗಿದೆ. ವಾರಾಣಸಿಯ, ಅಲೌಕಿಕತೆ, ಅಧ್ಯಾತ್ಮಿಕತೆ, ಅಲ್ಲಿನ ಘಾಟ್ ಗಳು, ಅಲ್ಲಿಯ ಕಾಲಾತೀತತೆಯಿಂದ ಕೂಡಿದ ಜೀವನ ಇವುಗಳು ದೈಜಿ ಸಿನೆಮಾದ ಮುಖ್ಯ ವಿಷಯವಾದ ಅಗೋಚರ, ಅತೀಂದ್ರಿಯ ಶಕ್ತಿ, ನಂಬಿಕೆ, ಮನುಷ್ಯನ ಕಾಡುವ ಈ ಶಕ್ತಿಗಳ ಬಗೆಗಿನ ಕಥೆಗೆ ಸರಿಯಾದ ಒಂದು ವಾತಾವರಣ ಒದಗಿಸಿಕೊಟ್ಟಿತು. ಶಿವಾಜಿ ಸುರತ್ಕಲ್ ೧ ಮತ್ತು ೨ ಯಶಸ್ವಿ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಆಕಾಶ್ ಶ್ರೀವತ್ಸ ಅವರ ನಿರ್ದೇಶನ ಹಾಗೂ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ನ ಅಡಿಯಲ್ಲಿ ನಿರ್ಮಿಸುತ್ತಿರುವ ಸಿನಿಮಾ ಇದಾಗಿದೆ. ನಿರ್ಮಾಪಕ ರವಿ ಕಶ್ಯಪ್ ಅವರ ಈ ಸಿನಿಮಾ ದೈಜಿಯು ನೈಜ ಘಟನೆ ಆಧಾರಿತ ಚಿತ್ರ. ಇದು ಮನುಷ್ಯ ಹಾಗೂ ಅಲೌಕಿಕ, ಅತೀಂದ್ರಿಯ, ಅಗೋಚರ ಶಕ್ತಿಗಳ ನಡುವಿನ ಸಂಕೀರ್ಣ ಸಂಬಂಧಗಳ ಅನ್ವೇಷಣೆಯೇ ಇದರ ತಿರುಳು. ಚಿತ್ರತಂಡವು ಸತತವಾಗಿ…

Read More

ತಮ್ಮ ಜನಪ್ರಿಯ ನಟನೆಯ ಮೂಲಕ ಕನ್ನಡಿಗರ ಜನಮನಸೂರೆಗೊಂಡಿದ್ದ ಹಿರಿಯ ನಟ ಕಲಾತಪಸ್ವಿ ರಾಜೇಶ್ ಅವರ ಮೊಮ್ಮಗ ಸಾಯಿನಂದ್ “ಮುಜುಗರ” ಚಿತ್ರದ ಮೂಲಕ ನಾಯಕನಾಗಿ ಚಂದನವನಕ್ಕೆ ಅಡಿಯಿಟ್ಟಿದ್ದಾರೆ. ಶಾಂತ ಶ್ರೀನಿವಾಸ್ ಡಿ ನಿರ್ಮಿಸುತ್ತಿರುವ ಈ ಚಿತ್ರವನ್ನು ತರುಣ್ ಎನ್ (ಜ್ಯೋತಿಪ್ರಿಯ) ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನೆಟ್ಟಕಲ್ಲಪ್ಪ ಸರ್ಕಲ್ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಟ ಪ್ರಮೋದ್ ಶೆಟ್ಟಿ ಆರಂಭ ಫಲಕ ತೋರಿದರು. ನಿರ್ಮಾಪಕಿ ಶಾಂತ ಶ್ರೀನಿವಾಸ್ ಕ್ಯಾಮೆರಾ ಚಾಲನೆ ಮಾಡಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. “ನನಗೂ, ಚಿತ್ರರಂಗಕ್ಕೂ 20 ವರ್ಷಗಳ ನಂಟು. ನಾಗಾಭರಣ, ಅನಂತರಾಜು, ಅಮರ್ ಹಾಗೂ “ಕಂಠಿ” ಭರತ್ ಅವರ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಸ್ವತಂತ್ರ ನಿರ್ದೇಶಕನಾಗಿ ಇದು ಮೊದಲ ಚಿತ್ರ. “ಮುಜುಗರ” ಕಾಫಿತೋಟದ ಸುತ್ತ ನಡೆಯುವ ಪ್ರೇಮ ಕಥೆ. ರಾಜೇಶ್ ಅವರ ಮೊಮ್ಮಗ ಸಾಯಿನಂದ್ ನಾಯಕನಾಗಿ, ನಿಮಿಷ್ಕ ಹಾಗೂ ತನು ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಎರಡನೇ ನಾಯಕನಾಗಿ ಸುಭಾಷ್…

Read More

ಕವೀಶ್ ಶೆಟ್ಟಿ ಮತ್ತು ಮೇಘ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ನಿರ್ಮಾಣವಾಗಿರುವ  ‘ಓ.ಎಲ್.ಸಿ'(ಆಪರೇಷನ್ ಲಂಡನ್ ಕೆಫೆ) ಚಿತ್ರ ನವೆಂಬರ್ 28ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಬಿಡುಗಡೆಗೂ ಪೂರ್ವದಲ್ಲಿ ಆಯೋಜಿಸಲಾಗಿದ್ದ ಪ್ರೀ ರಿಲೀಸ್ ಇವೆಂಟ್ ನಲ್ಲಿ ಹಿರಿಯ ನಿರ್ದೇಶಕ ಶಶಾಂಕ್ ಡಾ. ವಿ.ನಾಗೇಂದ್ರಪ್ರಸಾದ್ ಬರೆದಿರುವ “ವೆಲ್ಕಮ್ ಟು ಜಂಗಲ್” ಹಾಡು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಮೊದಲು ಮಾತನಾಡಿದ ನಿರ್ದೇಶಕ ಸಡಗರ ರಾಘವೇಂದ್ರ, ನಾನು ಶಶಾಂಕ್ ಅವರ ಜೊತೆಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. “ಓ.ಎಲ್.ಸಿ” ನನ್ನ ಮೊದಲ ನಿರ್ದೇಶನದ ಚಿತ್ರ. ಈ ಚಿತ್ರದ ನಾಯಕನಾಗಿ ನಟಿಸಿರುವ ಕವೀಶ್ ಶೆಟ್ಟಿ ನಟಿಸಿದ್ದಾರೆ. ನಾಯಕಿಯಾಗಿ ಮೇಘ ಶೆಟ್ಟಿ ಅಭಿನಯಿಸಿದ್ದಾರೆ. ಮರಾಠಿ ಭಾಷೆಯ ಶಿವಾನಿ ಪ್ರಮುಖಪಾತ್ರದಲ್ಲಿದ್ದಾರೆ. ಇನ್ನೂ, ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ಸಿನಿಮಾ ಮಾಡಿದ್ದಾರೆ. ಚಿತ್ರ ಚೆನ್ನಾಗಿ ಬರಲು ಚಿತ್ರತಂಡದ ಸದಸ್ಯರು ಸಹಕಾರ ನೀಡಿದ್ದಾರೆ‌ ಎಂದರು. ಮುಂದುವರಿದು…

Read More

ಕೆಲವು ವರ್ಷಗಳ ಹಿಂದೆ “ಗ್ಯಾಪಲ್ಲೊಂದು ಸಿನಿಮಾ” ಮಾಡಿ ನಂತರ “ಓಮಿನಿ” ಎಂಬ ಚಿತ್ರ ನಿರ್ದೇಶಿಸಿರುವ ಹೆದ್ದೂರ್ ಮಂಜುನಾಥ್ ಶೆಟ್ಟಿ ಈಗ “ಪಾಠಶಾಲಾ” ಎಂಬ ಚಿತ್ರ‌ ನಿರ್ದೇಶನ ಮಾಡಿದ್ದಾರೆ. ಈ‌ ಚಿತ್ರ ನವೆಂಬರ್ 28ರಂದು ಬಿಡುಗಡೆಯಾಗುತ್ತಿದೆ “MS SQUARE MOVIES” ಲಾಂಛನದಲ್ಲಿ ನಾನು ಹಾಗೂ ನನ್ನ ಪತ್ನಿ ಪ್ರೀತಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ‌. ಹತ್ತಕ್ಕೂ ಅಧಿಕ ಸ್ನೇಹಿತರ ಸಹ ನಿರ್ಮಾಣ ಈ ಚಿತ್ರಕ್ಕಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ. ನಲವತ್ತಕ್ಕೂ ಆಧಿಕ ಮಕ್ಕಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಮಕ್ಕಳಿಗೆ ತರಭೇತಿ ನೀಡಿ ಆನಂತರ ಚಿತ್ರೀಕರಣ ಮಾಡಲಾಯಿತು. ತೀರ್ಥಹಳ್ಳಿ ಆಸುಪಾಸಿನ ಮಕ್ಕಳೇ ಇದರಲ್ಲಿ ನಟಿಸಿದ್ದಾರೆ. ಹಿರಿಯರಾದ ಬಾಲಾಜಿ ಮನೋಹರ್, ಸುಧಾಕರ್ ಬನ್ನಂಜೆ, ಕಿರಣ್ ನಾಯಕ್, ನಟನ ಪ್ರಶಾಂತ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ: ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ʻನಾಯಿ ಇದೆ ಎಚ್ಚರಿಕೆʼ ಚಿತ್ರ ನವೆಂಬರ್ 28ಕ್ಕೆ ತೆರೆಗೆ 80ರ ಕಾಲಘಟ್ಟದ ಕಥೆ 80, 90 ರ ಕಾಲಘಟ್ಟದಲ್ಲಿ ಶಿಕ್ಷಕರ ಹಾಗೂ…

Read More

ನಾಯಿ ಸಾಕಿರುವವರ ಮನೆಯ ಮುಂದೆ ಸಾಮಾನ್ಯವಾಗಿ ಕಾಣುವ ಪದ ” ನಾಯಿ ಇದೆ ಎಚ್ಚರಿಕೆ”. ಈಗ ಇದೇ ಚಿತ್ರದ ಶೀರ್ಷಿಕೆಯಾಗಿದೆ. ಚಿತ್ರಕ್ಕೆ ಈ ಶೀರ್ಷಿಕೆ ಏಕೆ? ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ಲಾವಣ್ಯ ಗದೆ ಅವರು ನಿರ್ಮಾಣ ಮಾಡಿರುವ ಈ ಚಿತ್ರದ ನಾಯಕನಾಗಿ ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಲೀಲಾಮೋಹನ್ ಪಿವಿಆರ್ ಅಭಿನಯಿಸಿದ್ದಾರೆ. ಕಲಿಗೌಡ ನಿರ್ದೇಶಿಸಿದ್ದಾರೆ. “ನನಗೂ ಚಿತ್ರರಂಗಕ್ಕೂ ಹದಿನೈದು ವರ್ಷಗಳ ನಂಟು. ಈ ಹಿಂದೆ “ತನಿಖೆ” ಎಂಬ ಚಿತ್ರ ನಿರ್ದೇಶನ ಮಾಡಿದ್ದ ನನಗೆ ಇದು ಎರಡನೇ ನಿರ್ದೇಶನದ ಚಿತ್ರ. ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ನಾಯಿ ಇದೆ ಎಚ್ಚರಿಕೆ” ಚಿತ್ರ ಶೀರ್ಷಿಕೆಯಲ್ಲಿ ಎಷ್ಟು ಕುತೂಹಲ ಮೂಡಿಸಿದೆಯೋ, ಅಷ್ಟೇ ಕುತೂಹಲ ಸಿನಿಮಾದಲ್ಲೂ ಇರುತ್ತದೆ. ಯಾರು ಊಹಿಸದ ರೋಚಕ ಸನ್ನಿವೇಶಗಳು ಈ ಚಿತ್ರದ ಹೈಲೆಟ್. ನಾಯಿ ನಿಯತ್ತಿನ ಪ್ರಾಣಿ ಎಂದು ಎಲ್ಲರಿಗೂ ಗೊತ್ತು. ಅದು ಬದುಕಿದಾಗಷ್ಟೇ ಅಲ್ಲ. ಸತ್ತ ಮೇಲೂ ಅದರ ನಿಯತ್ತು ಕಡಿಮೆ ಆಗಲ್ಲ ಎಂಬದನ್ನು ನಮ್ಮ ಚಿತ್ರದ ಮೂಲಕ ತೋರಿಸಿದ್ದೇವೆʼ ಎಂದರು. ಇದನ್ನೂ…

Read More