Close Menu
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ
What's Hot

ಗಿಲ್ಲಿ ನಾಯಕನಾಗಿ ನಟಿಸಿರುವ `ಸೂಪರ್ ಹಿಟ್’ ಚಿತ್ರ ಫೆಬ್ರವರಿ 27ರಂದು ತೆರೆಗೆ!

February 10, 2026

ವೀರ ಕಂಬಳ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ!

February 10, 2026

Landlord Review: ದುನಿಯಾ ವಿಜಯ್-‌ ರಾಜ್‌ ಬಿ ಶೆಟ್ಟಿಯ ʻಲ್ಯಾಂಡ್‌ ಲಾರ್ಡ್‌ʼ ಸಿನಿಮಾ ಹೇಗಿದೆ?

January 23, 2026
Facebook X (Twitter) Instagram
Facebook X (Twitter) Instagram
ಜಗಲಿ ಕಟ್ಟೆ
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ
ಜಗಲಿ ಕಟ್ಟೆ
Home»ಮುಖಪುಟ»ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ‘ದಿ ರಾಜಾಸಾಬ್’ ಚಿತ್ರದ ‘ಸಹನಾ ಸಹನಾ…’ ಹಾಡು ಬಿಡುಗಡೆ
ಮುಖಪುಟ

ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ‘ದಿ ರಾಜಾಸಾಬ್’ ಚಿತ್ರದ ‘ಸಹನಾ ಸಹನಾ…’ ಹಾಡು ಬಿಡುಗಡೆ

Jagali KatteBy Jagali KatteDecember 18, 2025No Comments2 Mins Read
WhatsApp Facebook Twitter LinkedIn Email Copy Link
ರಾಜಾಸಾಬ್‌ ಸಿನಿಮಾದ ಮೊದಲ ಹಾಡು ಬಿಡುಗಡೆ
Share
Facebook Twitter LinkedIn Pinterest Email

ಹೈದರಾಬಾದ್: ರೆಬೆಲ್ ಸ್ಟಾರ್ ಪ್ರಭಾಸ್, ನಿರ್ದೇಶಕ ಮಾರುತಿ ಮತ್ತು ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಕಾಂಬಿನೇಷನ್‌ನಲ್ಲಿ ಸಿದ್ಧವಾಗುತ್ತಿರುವ ಬಹುನಿರೀಕ್ಷಿತ ಚಿತ್ರ ‘ದಿ ರಾಜಾ ಸಾಬ್’ ಚಿತ್ರದ ಎರಡನೇ ಹಾಡು ‘ಸಹನಾ ಸಹನಾ’ ಬುಧವಾರ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು.

ಹೈದರಾಬಾದ್‌ನ ಮಾಲ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಮೆಲೋಡಿ ಹಾಡನ್ನು ಲೋಕಾರ್ಪಣೆ ಮಾಡಲಾಯಿತು. ಹಾರರ್-ಕಾಮಿಡಿ ಜಾನರ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ನಿರ್ಮಾಪಕರಾದ ಟಿ.ಜಿ. ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ಅವರು ಅದ್ಧೂರಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: ತಾಂತ್ರಿಕವಾಗಿ ಬಲು ಗಟ್ಟಿಯಾಗಿದೆ ʻ45ʼ ಸಿನಿಮಾ! ಚೊಚ್ಚಲ ಚಿತ್ರದಲ್ಲಿ ಅರ್ಜುನ್‌ ಜನ್ಯ ಕಮಾಲ್‌

ಸಂಗೀತ ನಿರ್ದೇಶಕರ ಮಾತು

ಈ ಕಾರ್ಯಕ್ರಮದದ ಕೇಂದ್ರ ಬಿಂದು ಸಂಗೀತ ನಿರ್ದೇಶಕ ಥಮನ್ ಎಸ್ ಮಾತನಾಡಿ, “ರಾಜಾ ಸಾಬ್ ಚಿತ್ರದ ಹಾಡುಗಳು ಅದ್ಭುತವಾಗಿ ಬಂದಿವೆ. ಈ ಹಿಂದೆ ಬಿಡುಗಡೆಯಾದ ಸಾಂಗ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈಗ ‘ಸಹನಾ ಸಹನಾ’ ಎಂಬ ಗೀತೆಯನ್ನು ನಿಮ್ಮ ಮುಂದೆ ತಂದಿದ್ದೇವೆ. ಚಿತ್ರದಲ್ಲಿ ಪ್ರಭಾಸ್ ಅವರ ಡ್ಯಾನ್ಸ್ ಮತ್ತು ಸ್ಟೈಲ್ ಅಭಿಮಾನಿಗಳಿಗೆ ಹಬ್ಬವಾಗಲಿದೆ,” ಎಂದರು.

ನಿರ್ದೇಶಕ ಮಾರುತಿ ಸಹ ಹಾಡಿನ ಬಗ್ಗೆ ಮಾತನಾಡಿದರು. “ಪ್ರಭಾಸ್ ಅವರು ಯಾವಾಗಲೂ ತಮ್ಮ ಅಭಿಮಾನಿಗಳಿಗಾಗಿ ಶ್ರಮಿಸುತ್ತಾರೆ. ಈ ಸಂಕ್ರಾಂತಿಯು ‘ರೆಬೆಲ್ ಸಂಕ್ರಾಂತಿ’ ಆಗಲಿದೆ. ಚಿತ್ರದ ಕಂಟೆಂಟ್ ಬಗ್ಗೆ ಜನ ತೋರಿಸುತ್ತಿರುವ ಪ್ರೀತಿಗೆ ಧನ್ಯವಾದಗಳು,” ಎಂದು ತಿಳಿಸಿದರು.

ಇದನ್ನೂ ಓದಿ: ʻಮಹಾಕವಿʼ ಸಿನಿಮಾ ಶೂಟಿಂಗ್‌ ಮುಕ್ತಾಯ; ಇದು ಬರಗೂರು ರಾಮಚಂದ್ರಪ್ಪರ 25ನೇ ಚಿತ್ರ

“ಚಿತ್ರದ ಬಿಡುಗಡೆಯ ದಿನಾಂಕದ ಬಗ್ಗೆ ಶೀಘ್ರದಲ್ಲೇ ಅಧಿಕೃತ ಅಪ್‌ಡೇಟ್ ನೀಡಲಿದ್ದೇವೆ. ಹೈದರಾಬಾದ್‌ನಲ್ಲಿ ಬೃಹತ್ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜಿಸುವ ಪ್ಲಾನ್ ಇದೆ. ಜನವರಿ 8 ರಂದು ಪ್ರೀಮಿಯರ್ ಶೋಗಳು ಪ್ರಾರಂಭವಾಗಲಿವೆ,” ಎಂದು ಮಾಹಿತಿ ನೀಡಿದರು ನಿರ್ಮಾಪಕ ಟಿ.ಜಿ. ವಿಶ್ವಪ್ರಸಾದ್. ಚಿತ್ರದ ನಾಯಕಿಯರಾದ ನಿಧಿ ಅಗರ್ವಾಲ್ ಮತ್ತು ರಿದ್ಧಿ ಕುಮಾರ್ ಅವರು ಪ್ರಭಾಸ್ ಅಭಿಮಾನಿಗಳು ತೋರುತ್ತಿರುವ ಅತೀವ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು.

ತಾರಾಗಣ ಮತ್ತು ತಾಂತ್ರಿಕ ವರ್ಗ

ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣದ ದಿ ರಾಜಾಸಾಬ್‌ ಚಿತ್ರದಲ್ಲಿ ನಾಯಕನಾಗಿ ಪ್ರಭಾಸ್, ನಾಯಕಿಯರಾಗಿ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್, ರಿದ್ಧಿ ಕುಮಾರ್ ನಟಿಸಿದ್ದಾರೆ. ಇನ್ನುಳಿದಂತೆ, ಸಂಜಯ್ ದತ್, ಬೋಮನ್ ಇರಾನಿ ಮುಂತಾದವರು ಚಿತ್ರದಲ್ಲಿದ್ದಾರೆ. ಥಮನ್ ಎಸ್ ಅವರ ಸಂಗೀತ, ಕಾರ್ತಿಕ್ ಪಳನಿ ಅವರ ಛಾಯಾಗ್ರಹಣ, ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನ, ಮಾರುತಿ ಅವರ ನಿರ್ದೇಶನ ಚಿತ್ರಕ್ಕಿದೆ. ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 9 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.

raajsaab movie teaser rajasaab movie teaser the raajsaab prabhas movie teaser the raja saab 2025 full movie the raja saab full movie the raja saab full movie in hindi the raja saab hindi full movie the raja saab movie the raja saab movie 2025 the raja saab movie of prabhas in 2025 the raja saab movie trailer the rajasaab
Share. Facebook Twitter Pinterest LinkedIn Tumblr Email
Jagali Katte
  • Website

Related Posts

ಗಿಲ್ಲಿ ನಾಯಕನಾಗಿ ನಟಿಸಿರುವ `ಸೂಪರ್ ಹಿಟ್’ ಚಿತ್ರ ಫೆಬ್ರವರಿ 27ರಂದು ತೆರೆಗೆ!

February 10, 2026

ವೀರ ಕಂಬಳ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ!

February 10, 2026

Landlord Review: ದುನಿಯಾ ವಿಜಯ್-‌ ರಾಜ್‌ ಬಿ ಶೆಟ್ಟಿಯ ʻಲ್ಯಾಂಡ್‌ ಲಾರ್ಡ್‌ʼ ಸಿನಿಮಾ ಹೇಗಿದೆ?

January 23, 2026

‘ಕರಾವಳಿ’ಯಿಂದ ಬಂತು ಫಸ್ಟ್ ರೊಮ್ಯಾಂಟಿಕ್ ಮುದ್ದು ಗುಮ್ಮ

January 23, 2026
Add A Comment
Leave A Reply Cancel Reply

Editors Picks
Latest Posts

Subscribe to Updates

Get the latest sports news from SportsSite about soccer, football and tennis.

© 2026 Jagali Katte. Designed by Karnataka Best Digital Services.
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ

Type above and press Enter to search. Press Esc to cancel.