ಚಿತ್ರ: 45
ನಿರ್ದೇಶನ: ಅರ್ಜುನ್ ಜನ್ಯ
ನಿರ್ಮಾಣ: ರಮೇಶ್ ರೆಡ್ಡಿ
ತಾರಾಗಣ: ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ, ಕೌಸ್ತುಭ ಮಣಿ, ಸುಧಾರಾಣಿ, ಮೊಟ್ಟೈ ರಾಜೇಂದ್ರನ್, ಪ್ರಮೋದ್ ಶೆಟ್ಟಿ, ಮಂಜು ಪಾವಗಡ
ರೇಟಿಂಗ್: 3.5/5
45 ಅನ್ನೋ ಸಿನಿಮಾ ಶುರುವಾಗಿ 3 ವರ್ಷ ಆಯ್ತು. ಸಿನಿಮಾ ಅನೌನ್ಸ್ ಆದ ಮೇಲೆ ಒಂದಲ್ಲ ಒಂದು ಕಾರಣಕ್ಕೆ ಕ್ಯೂರಿಯಾಸಿಟಿ ಕ್ರಿಯೆಟ್ ಮಾಡಿತ್ತು. ಕಾಸ್ಟಿಂಗ್ ವೈಸ್, ಮೇಕಿಂಗ್ ವಿಚಾರದಲ್ಲಿ ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಆಗಿತ್ತು. ಅದ್ರಲ್ಲೂ ಮೂರ್ಮೂರು ಸ್ಟಾರ್ಗಳನ್ನು ಮ್ಯಾನೇಜ್ ಮಾಡೋದು ನಿರ್ದೇಶಕರಿಗೆ ದೊಡ್ಡ ಕೆಲಸ. ಆದ್ರೆ, 45ನಲ್ಲಿ ತುಂಬ ಚೆನ್ನಾಗಿ ಬ್ಯಾಲನ್ಸ್ ಮಾಡಿದ್ದಾರೆ.
45 ಸಿನಿಮಾ ಅರ್ಜುನ್ ಜನ್ಯ ನಿರ್ದೇಶನ ಮಾಡಿರೋ ಸಿನಿಮಾ. ರಮೇಶ್ ರೆಡ್ಡಿ ಅವ್ರು ನಿರ್ಮಾಣ ಮಾಡಿದ ಹೈ ಬಜೆಟ್ ಸಿನಿಮಾ. ಶಿವರಾಜ್ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿ ಮೇನ್ ಲೀಡ್ ಆಗಿ ನಟಿಸಿದ್ದಾರೆ. ಇದೆಲ್ಲ ಗೊತ್ತಿರೋ ವಿಷ್ಯಾ. ಇದೀಗ ಸ್ಟ್ರೇಟ್ ಆಗಿ ವಿಷ್ಯಕ್ಕೆ ಬರ್ತಿನಿ.
45 ಸಿನಿಮಾದ ಫಸ್ಟ್ ಸೀನ್ನಿಂದಲೇ ಕಥೆ ಶುರುವಾಗುತ್ತೆ. ಪ್ಯೂರ್ ಡಿವೈನಿಟಿ ಕಂಟೆಂಟ್ ಇರೋವಂಥ ಸಿನಿಮಾ ಇದು. ಕಾಂತಾರ ಸಿನಿಮಾ ಬಳಿಕ ಕನ್ನಡದಲ್ಲಿ ಬಂದಿರೋ ಮತ್ತೊಂದು ಅತ್ಯುತ್ತಮ ಕಂಟೆಂಟ್ನ ಸಿನಿಮಾ ಅಂತಲೂ ಹೇಳ್ಬಹುದು. 45 ಸಿನಿಮಾದಲ್ಲಿ ಅಬ್ಬರ ಇದೆ. ಆಡಂಬರ ಇದೆ, ಕಲರ್ಫುಲ್ ಇದೆ, ಫಿಲಾಸಫಿಯೂ ಇದೆ, ಕ್ರೂರತೆಯೂ ಕಾಣಿಸುತ್ತೆ. ಒಂದೊಳ್ಳೆ ಮೆಸೆಜ್ ಅನ್ನೂ ನಿರ್ದೇಶಕರು ಹೇಳಿದ್ದಾರೆ. ಇದರಾಚೆಗೆ ಇನ್ನೂ ಹತ್ತಾರು ವಿಷ್ಯಗಳಿವೆ, ಬಗೆಬಗೆ ಲೇಯರ್ಗಳೂ ಈ ಸಿನಿಮಾದುದ್ದಕ್ಕೂ ಕಾಣಿಸುತ್ವೆ.
ಇದನ್ನೂ ಓದಿ: The Devil Review: ʻಡೆವಿಲ್ʼ ಜಾತ್ರೆಯಲ್ಲಿ ಉತ್ಸವ ಮೂರ್ತಿಗಷ್ಟೇ ಸಿಂಗಾರ ಸಾಕಾ? ʻದಿ ಡೆವಿಲ್ʼ ಸಿನಿಮಾ ವಿಮರ್ಶೆ
ಹಾಗಾದ್ರೆ ಏನಿದು ಸಿನಿಮಾ? ತುಂಬ ಸಿಂಪಲ್ ಆಗಿ ಹೇಳೋದಾದ್ರೆ, ಒಬ್ಬ ಮನುಷ್ಯ ಸತ್ತ 45 ದಿನಗಳಲ್ಲಿ ಏನೆಲ್ಲ ಆಗುತ್ತೆ ಅನ್ನೋದನ್ನ ಅರ್ಜುನ್ ಜನ್ಯ ಅವ್ರು ಹೇಳಿದ್ದಾರೆ. ಗರುಡ ಪುರಾಣವನ್ನೇ ಇಡೀ ಸಿನಿಮಾದ ಮೂಲವನ್ನಾಗಿಸಿಕೊಂಡು, ಅಚ್ಚುಕಟ್ಟಾಗಿ ಕಥೆ ಮಾಡಿಕೊಂಡಿದ್ದಾರೆ. ಶಿವಪ್ಪ ಯಾರು, ರಾಯಪ್ಪನ ಕೆಲಸ ಏನು? ರಾಜ್ ಬಿ ಶೆಟ್ಟಿಗೆ ಸಿಕ್ಕಿರೋ ಪಾತ್ರ ಎಂಥದ್ದು? ಈ ಎಲ್ಲ ಕೌತುಕವನ್ನ ಸಿನಿಮಾದಲ್ಲಿಯೇ ನೋಡಿ ಸವೀಬೇಕು.
ಗರುಡ ಪುರಾಣದ ಬಗ್ಗೆ ನಾವು ಈಗಾಗಲೇ ಕೇಳಿದ್ದೇವೆ. ಓದಿದ್ದೇವೆ. ಆದ್ರೆ, ಅದರಲ್ಲೇನಿದೆ ಅನ್ನೋದ್ರ ಪೂರ್ತಿ ವಿವರ ಎಲ್ಲರಿಗೂ ಗೊತ್ತಿಲ್ಲ. ಈ ಸಿನಿಮಾದಲ್ಲಿ ಗರುಡ ಪುರಾಣದ ಒಂದಷ್ಟು ಅಂಶಗಳನ್ನ ನಿರ್ದೇಶಕ್ರು ಟಚ್ ಮಾಡಿದ್ದಾರೆ. ಸೀರಿಯಸ್ ವಿಚಾರವನ್ನು ಸ್ಕ್ರೀನ್ ಮೇಲೆ ಲೈವ್ಲಿಯಾಗಿ, ಎಂಟರ್ಟೈನಿಂಗ್ ಆಗಿ ಹೇಳ್ತಾ ಹೋಗಿದ್ದಾರೆ. ಮೂಲ ಆಶಯಗಳಿಗೆ ಎಲ್ಲೂ ಧಕ್ಕೆ ಮಾಡದೆ, ತುಂಬ ಜಾಣ್ಮೆಯಿಂದ ಅರ್ಜುನ್ ಜನ್ಯ ಈ ಸಿನಿಮಾ ಮಾಡಿದ್ದಾರೆ.
ಸಿನಿಮಾ ಅಂದ್ರೆ, ಎಂಟರ್ಟೇನ್ಮೆಂಟ್. ಆ ಎಲಿಮೆಂಟ್ಗಳನ್ನು ಮಾಸ್ ಜೊತೆ ಮಿಶ್ರಣ ಮಾಡಿದ್ದಾರೆ. ಶಿವಣ್ಣ ಮತ್ತು ಉಪ್ಪಿ ಅಂದ ತಕ್ಷಣ ಓಂ ಸಿನಿಮಾ ನೆನಪಿಗೆ ಬರುತ್ತೆ. ಆ ಓಂ ಸಿನಿಮಾವನ್ನೂ 45 ಚಿತ್ರದಲ್ಲಿ ಬ್ಲೆಂಡ್ ಮಾಡಿದ್ದಾರೆ. ʻಗರುಡ ಗಮನ ವೃಷಭ ವಾಹನʼ ಚಿತ್ರದ ಝಲಕ್ಕೂ ಕಾಣಿಸುತ್ತೆ. ಇದೆಲ್ಲದಕ್ಕಿಂತ ಹೆಚ್ಚಾಗಿ, ಸ್ಟಾರ್ಕಾಸ್ಟ್ನ ಫೇಮ್ಗೆ ತಕ್ಕಂತೆ ಅವ್ರ ಸಿನಿ ಕೆರಿಯರ್ನ ಹೈಲೈಟ್ಸ್ಗಳನ್ನೂ ಇಲ್ಲಿ ಕಾಣ್ಬಹುದು.
45 ಸಿನಿಮಾವನ್ನ ಅರ್ಜುನ್ ಜನ್ಯ ಶಿವಣ್ಣನಿಗಾಗಿ ಮಾಡಿರೋ ಸಿನಿಮಾ. ಶಿವಣ್ಣನ ಅಪ್ಪಟ ಅಭಿಮಾನಿಯೊಬ್ಬ, ಶಿವಣ್ಣನನ್ನ ಹೇಗೆಲ್ಲ ತೆರೆಮೇಲೆ ತೋರಿಸ್ಬೇಕೋ ಆ ಮಟ್ಟಿಗೆ ತೋರಿಸೋ ಪ್ರಯತ್ನ ಮಾಡಿದ್ದಾರೆ. ಈ ವರೆಗೂ ಶಿವಣ್ಣನನ್ನು ಯಾರೂ ಈ ರೀತಿ ತೋರಿಸೋ ಪ್ರಯತ್ನ ಮಾಡಿಲ್ಲ. ಅದು 45 ಸಿನಿಮಾದಲ್ಲಿ ನೆರವೇರಿದೆ. ಸಾಕಾರಗೊಂಡಿದೆ. ಕೊನೆಯ 20 ನಿಮಿಷದ ಕ್ಲೈಮ್ಯಾಕ್ಸ್ ಗೂಸ್ಬಂಪ್ಸ್ ತರಿಸುತ್ತೆ. ತೆರೆಮೇಲೆ ಸಾಕ್ಷಾತ್ ಶಿವತಾಂಡವ!
ಫಸ್ಟ್ ಹಾಫ್ ಕೊನೆಗೆ ಸಿಗೋ ಟ್ವಿಸ್ಟು, ಆ ರಿದಮ್ ಮತ್ತೆ ಟೆಂಪೋವನ್ನು ಕೊನೇ ತಂಕ ಮೆಂಟೇನ್ ಮಾಡಿದ್ದಾರೆ ನಿರ್ದೇಶಕರು. ಮೇಕಿಂಗ್ ವಿಚಾರದಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಅವ್ರು ಕೈಬಿಚ್ಚಿ ಖರ್ಚು ಮಾಡಿದ್ದಾರೆ. ವಿಎಫ್ಎಕ್ಸ್ ಎಲಿಮೆಂಟ್ಸ್ 45 ಸಿನಿಮಾದ ಹೈಲೈಟ್ಸ್. ವಿದೇಶಿ ಟೆಕ್ನಿಶಿಯನ್ಗಳನ್ನ ಬಳಸಿಕೊಂಡು, ರಿಯಾಲಿಟಿಗೆ ಹತ್ರ ಅನಿಸೋವಷ್ಟು ನ್ಯಾಚುರಲ್ ಕೆಲಸವನ್ನ ಅವ್ರಿಂದ ತೆಗೆಸಿದ್ದಾರೆ.
ಓಂ ಶಕ್ತಿ ಅನ್ನೋ ಸ್ತುತಿಯಿಂದ ಆರಂಭವಾದ ಸಿನಿಮಾ, ಓಂ ನಮಃ ಶಿವಾಯ ಮೂಲಕ ಎಂಡ್ ಆಗತ್ತೆ. ನಮ್ಮ ಹಿಂದಿನ ಪುರಾಣದ ಕಥೆಗಳನ್ನ ಇಂದಿನ ಕಾಂಟೆಂಪ್ರರಿಗೆ ತಕ್ಕಂತೆ ಬ್ಲೆಂಡ್ ಮಾಡಿ, ಫ್ಯಾಂಟಸಿ ಲೋಕ ಸೃಷ್ಟಿಸಿ ಕಥೆ ಹೇಳೋದು ನಿಜಕ್ಕೂ ಒಂದು ಸಾಹಸ. ಆ ವಿಷ್ಯದಲ್ಲಿ ಚೊಚ್ಚಲ ಸಿನಿಮಾದಲ್ಲಿಯೇ ಭರವಸೆ ಮೂಡಿಸಿದ್ದಾರೆ ಅರ್ಜುನ್ ಜನ್ಯ.
ಸತ್ಯ ಹೆಗಡೆ ಅವ್ರ ಕ್ಯಾಮರಾ ವರ್ಕ್ ಸಖತ್ ಆಗಿದೆ. ಇನ್ನು ಮ್ಯೂಸಿಕ್ ಬಗ್ಗೆ ಹೇಳೋದಾದ್ರೆ, ಡೈರೆಕ್ಟರೂ ಅರ್ಜುನ್ ಜನ್ಯ ಅವರೇ ಆಗಿರೋದ್ರಿಂದ, ಚಿತ್ರದ ಇಂಟೆನ್ಸಿಟಿಗೆ ತಕ್ಕಂತೆ, ಬೇರೆ ರೀತಿಯಲ್ಲಿಯೇ ಬ್ಯಾಕ್ಗ್ರೌಂಡ್ ಸ್ಕೋರ್ ಕೊಟ್ಟಿದ್ದಾರೆ. ಇನ್ನು ಫರ್ಫಾರ್ಮನ್ಸ್ ವಿಚಾರಕ್ಕೆ ಬಂದ್ರೆ, ಶಿವಣ್ಣ ಅವ್ರದ್ದು ಎಂದಿನಂತೆ ಸೂಪರ್ ಆಕ್ಟಿಂಗ್, ಉಪೇಂದ್ರ ಅವರ ಬ್ಯಾಡ್ ಬಾಯ್ ರೂಲ್ ಸಖತ್ ವೈಲ್ಡ್ ಆಗಿದೆ. ಅಮಾಯಕ ರಾಜ್ ಬಿ ಶೆಟ್ಟಿಗೂ ಒಳ್ಳೆ ಸ್ಪೇಸ್ ಸಿಕ್ಕಿದೆ.
ಚಿತ್ರದ ರೈಟಿಂಗ್ನಲ್ಲಿ ಡೆಪ್ತ್ ಇದೆ. ಪುರಾಣವನ್ನು ಎಂಟರ್ಟೇನ್ ರೀತಿಯಲ್ಲಿ ಹೇಳೋದು ಕಷ್ಟ. ಅದನ್ನು ಅಷ್ಟೇ ನೀಟಾಗಿ ಪ್ರಸೆಂಟ್ ಮಾಡಿದ್ದಾರೆ. ಅಮ್ಮನ ಸೆಂಟಿಮೆಂಟ್, ಪ್ರೇಯಸಿಯ ಆ ಇಂಟೆನ್ಸ್ ಪ್ರೀತಿ ಚಿತ್ರದಲ್ಲಿ ಕಾಣಿಸುತ್ತೆ. ಒಂದೊಳ್ಳೆ ಎಕ್ಸ್ಪಿರಿಮೆಂಟ್ ಜೊತೆಗೆ ಒಳ್ಳೆಯ ಎಕ್ಸ್ಪೀರಿಯೆನ್ಸ್ ನಿಮಗೆ ಸಿಗುತ್ತೆ. ಇದು ನಮ್ ರಿವ್ಯೂವ್.
