Close Menu
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ
What's Hot

ಗಿಲ್ಲಿ ನಾಯಕನಾಗಿ ನಟಿಸಿರುವ `ಸೂಪರ್ ಹಿಟ್’ ಚಿತ್ರ ಫೆಬ್ರವರಿ 27ರಂದು ತೆರೆಗೆ!

February 10, 2026

ವೀರ ಕಂಬಳ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ!

February 10, 2026

Landlord Review: ದುನಿಯಾ ವಿಜಯ್-‌ ರಾಜ್‌ ಬಿ ಶೆಟ್ಟಿಯ ʻಲ್ಯಾಂಡ್‌ ಲಾರ್ಡ್‌ʼ ಸಿನಿಮಾ ಹೇಗಿದೆ?

January 23, 2026
Facebook X (Twitter) Instagram
Facebook X (Twitter) Instagram
ಜಗಲಿ ಕಟ್ಟೆ
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ
ಜಗಲಿ ಕಟ್ಟೆ
Home»ಕಿರುತೆರೆ»ಸ್ಟಾರ್ ಸುವರ್ಣದಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ಜೈ ಲಲಿತಾ’; ಡಿಸೆಂಬರ್‌ 8ರಿಂದ ಶುಭಾರಂಭ
ಕಿರುತೆರೆ

ಸ್ಟಾರ್ ಸುವರ್ಣದಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ಜೈ ಲಲಿತಾ’; ಡಿಸೆಂಬರ್‌ 8ರಿಂದ ಶುಭಾರಂಭ

Jagali KatteBy Jagali KatteDecember 4, 2025Updated:December 4, 2025No Comments1 Min Read
WhatsApp Facebook Twitter LinkedIn Email Copy Link
ಡಿಸೆಂಬರ್‌ ೮ರಿಂದ ಸ್ಟಾರ್‌ ಸುವರ್ಣದಲ್ಲಿ ಜೈ ಲಲಿತಾ ಸೀರಿಯಲ್
Share
Facebook Twitter LinkedIn Pinterest Email

ವೀಕ್ಷಕರು ಇಷ್ಟಪಡುವಂತಹ ಧಾರಾವಾಹಿಗಳನ್ನು ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣದಲ್ಲಿ ಇದೀಗ ಹೊಸ ಧಾರಾವಾಹಿ ‘ಜೈ ಲಲಿತಾ’ ಸೇರ್ಪಡೆಯಾಗುತ್ತಿದೆ. ಶ್ರೀ ಭ್ರಾಮರೀ ಕ್ರಿಯೇಶನ್ಸ್ ಅಡಿಯಲ್ಲಿ ಶ್ರೀನಿಧಿ ನಿರ್ಮಾಣ ಮಾಡುತ್ತಿದ್ದು ದರ್ಶಿತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಡಿಸೆಂಬರ್ 8ರಿಂದ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗಲು ಸಜ್ಜಾಗಿದೆ.

ಕಥೆಯ ಕುರಿತು ಹೇಳುವುದಾದರೆ ಭೈರವಪುರ ಹಳ್ಳಿಯ ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದಿರೋ ಲಲಿತಾ, ಅಪ್ಪನಿಗೆ ಮುದ್ದಿನ ಪುತ್ರಿಯಾದರೆ, ಊರಿನವರಿಗೆ ಮನೆ ಮಗಳು. ಅದೇ ಊರಿನ ರಾಜಕಾರಣಿ ದೇವರಾಜ್ ಚಕ್ರವರ್ತಿ ಎರಡನೇ ಮಗ ಜೈರಾಜ್ ತನಗನಿಸಿದನ್ನೇ ಮಾಡೋ ಶೂರ. ಅಚಾನಕ್ ಆಗಿ ರಾಜಕೀಯಕ್ಕೆ ಎಂಟ್ರಿ ಕೊಡುವ ಲಲಿತಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷೆಯಾಗುತ್ತಾಳೆ.

ಮುಂದೆ ದೇವರಾಜ್ ಚಕ್ರವರ್ತಿ ಮಗನಿಗೆ ಇಷ್ಟವಿಲ್ಲದಿದ್ದರೂ ಸ್ವಾರ್ಥಕ್ಕಾಗಿ ಲಲಿತಾಳನ್ನು ಸೊಸೆಯನ್ನಾಗಿ ಮಾಡಿಕೊಳ್ತಾನೆ. ನಂತರ ಆಕೆಯ ನಡೆ ಎಲ್ಲಿಗೆ ಕರೆದುಕೊಂಡು ಹೋಗುತ್ತದೆ. ಮದುವೆಯೇ ಕನಸಾಗಿದ್ದವಳಿಗೆ ಮದುವೆಯ ಜೀವನ ಮುಳ್ಳಿನಂತಾಗುತ್ತಾ? ಊರನ್ನೇ ಗೆದ್ದವಳು ಅತ್ತೆಯ ಮನಸ್ಸನ್ನು ಗೆದ್ದು ಚಕ್ರವರ್ತಿ ಮನೆತನದ ಸೊಸೆ ಸ್ಥಾನವನ್ನು ಪಡೆದುಕೊಳ್ತಾಳ? ಆಕೆಯ ಮುಗ್ದತೆಗೆ ಕರಗಿ ಜೈರಾಜ್ ಮನಸೋಲ್ತಾನಾ? ಎಂಬುದು ಸೀರಿಯಲ್ ಸಾರಾಂಶವಾಗಿದೆ.

ಜೈರಾಜ್ ಆಗಿ ಶಿವಾಂಕ್ ನಾಯಕ. ಲಲಿತಾ ಪಾತ್ರದಲ್ಲಿ ಮನಸ್ವಿ ನಾಯಕಿ. ಮಾವನಾಗಿ ಸುನಿಲ್‌ ಪುರಾಣಿಕ್, ಅತ್ತೆಯಾಗಿ ಸ್ಪಂದನ. ಉಳಿದಂತೆ ರೋಹಿತ್, ನಿರಂಜನ್, ರಶ್ಮಿತಾ, ಶ್ವೇತಾರಾವ್ ಸೇರಿದಂತೆ ಅನೇಕ ಅನುಭವಿ ಕಲಾವಿದರು ಅಭಿಯಿಸುತ್ತಿದ್ದಾರೆ. ಇದೇ ಸೋಮವಾರದಿಂದ (ಡಿಸೆಂಬರ್ 8) ಪ್ರತಿದಿನ ರಾತ್ರಿ 9.30ಕ್ಕೆ ’ಸ್ಟಾರ್ ಸುವರ್ಣ’ದಲ್ಲಿ ’ಜೈ ಲಲಿತಾ’ ಧಾರಾವಾಹಿ ಪ್ರಸಾರವಾಗಲಿದೆ.

Jai lalitha Kannada Serial Jai Lalitha Serial Kannada Serial news star suvarna Serials ಕನ್ನಡ ಕಿರುತೆರೆ ಜೈ ಲಲಿತಾ ಕನ್ನಡ ಧಾರಾವಾಹಿ ಜೈ ಲಲಿತಾ ಸೀರಿಯಲ್‌ ಸ್ಟಾರ್‌ ಸುವರ್ಣ ಧಾರಾವಾಹಿಗಳು
Share. Facebook Twitter Pinterest LinkedIn Tumblr Email
Jagali Katte
  • Website

Related Posts

ಗಿಲ್ಲಿ ನಾಯಕನಾಗಿ ನಟಿಸಿರುವ `ಸೂಪರ್ ಹಿಟ್’ ಚಿತ್ರ ಫೆಬ್ರವರಿ 27ರಂದು ತೆರೆಗೆ!

February 10, 2026

ವೀರ ಕಂಬಳ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ!

February 10, 2026

Landlord Review: ದುನಿಯಾ ವಿಜಯ್-‌ ರಾಜ್‌ ಬಿ ಶೆಟ್ಟಿಯ ʻಲ್ಯಾಂಡ್‌ ಲಾರ್ಡ್‌ʼ ಸಿನಿಮಾ ಹೇಗಿದೆ?

January 23, 2026

‘ಕರಾವಳಿ’ಯಿಂದ ಬಂತು ಫಸ್ಟ್ ರೊಮ್ಯಾಂಟಿಕ್ ಮುದ್ದು ಗುಮ್ಮ

January 23, 2026
Add A Comment
Leave A Reply Cancel Reply

Editors Picks
Latest Posts

Subscribe to Updates

Get the latest sports news from SportsSite about soccer, football and tennis.

© 2026 Jagali Katte. Designed by Karnataka Best Digital Services.
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ

Type above and press Enter to search. Press Esc to cancel.