Close Menu
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ
What's Hot

ಗಿಲ್ಲಿ ನಾಯಕನಾಗಿ ನಟಿಸಿರುವ `ಸೂಪರ್ ಹಿಟ್’ ಚಿತ್ರ ಫೆಬ್ರವರಿ 27ರಂದು ತೆರೆಗೆ!

February 10, 2026

ವೀರ ಕಂಬಳ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ!

February 10, 2026

Landlord Review: ದುನಿಯಾ ವಿಜಯ್-‌ ರಾಜ್‌ ಬಿ ಶೆಟ್ಟಿಯ ʻಲ್ಯಾಂಡ್‌ ಲಾರ್ಡ್‌ʼ ಸಿನಿಮಾ ಹೇಗಿದೆ?

January 23, 2026
Facebook X (Twitter) Instagram
Facebook X (Twitter) Instagram
ಜಗಲಿ ಕಟ್ಟೆ
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ
ಜಗಲಿ ಕಟ್ಟೆ
Home»ಸಿನಿಮಾ»ಸೃಜನ್ ಲೋಕೇಶ್ ನಿರ್ದೇಶನದ ಬಹು ನಿರೀಕ್ಷಿತ GST ಚಿತ್ರ ನವೆಂಬರ್ 28ರಂದು ತೆರೆಗೆ
ಸಿನಿಮಾ

ಸೃಜನ್ ಲೋಕೇಶ್ ನಿರ್ದೇಶನದ ಬಹು ನಿರೀಕ್ಷಿತ GST ಚಿತ್ರ ನವೆಂಬರ್ 28ರಂದು ತೆರೆಗೆ

Jagali KatteBy Jagali KatteNovember 24, 2025Updated:November 24, 2025No Comments1 Min Read
WhatsApp Facebook Twitter LinkedIn Email Copy Link
ಜಿಎಸ್‌ಟಿ ಚಿತ್ರದ ಫೋಸ್ಟರ್‌
ಜಿಎಸ್‌ಟಿ ಚಿತ್ರದ ಫೋಸ್ಟರ್‌
Share
Facebook Twitter LinkedIn Pinterest Email

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಸೃಜನ್ ಲೋಕೇಶ್ ನಾಯಕನಾಗಿ ನಟಿಸುವುದಲ್ಲದೆ, ಪ್ರಥಮ ಬಾರಿಗೆ ನಿರ್ದೇಶನವನ್ನು ಮಾಡಿರುವ “GST” ಚಿತ್ರ ಈ ವಾರ ನವೆಂಬರ್ 28 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. 

“GST”  ಚಿತ್ರ ಹಲವು ವಿಶೇಷತೆಗಳನ್ನೊಳಗೊಂಡಿದೆ. ಈ ಚಿತ್ರದಲ್ಲಿ ನಿರ್ಮಾಪಕ ಸಂದೇಶ್ ಅವರು  ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರ ಏನೆಂಬುದನ್ನು ನಿರ್ದೇಶಕ ಸೃಜನ್ ಲೋಕೇಶ್ ಗುಪ್ತವಾಗಿಟ್ಟಿದ್ದಾರೆ. ಇನ್ನು ಈ ಚಿತ್ರದಲ್ಲಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಹಾಗೂ ಸೃಜನ್ ಅವರ ಪುತ್ರ ಸುಕೃತ್ ಮೂರು ಜನ ಅಭಿನಯಿಸಿದ್ದಾರೆ. ಅಜ್ಜಿ, ಮಗ ಹಾಗೂ ಮೊಮ್ಮಗ ಮೂರು ಜನರನ್ನು ಒಟ್ಟಿಗೆ ತೆರೆಯ ಮೇಲೆ ಈ ಚಿತ್ರದಲ್ಲಿ ನೋಡಬಹುದು. ತಮ್ಮ ನಿರ್ದೇಶನದ ಮೊದಲ ಚಿತ್ರದಲ್ಲೇ ಸೃಜನ್ ತಮ್ಮ ತಾಯಿ ಹಾಗೂ ಮಗನಿಗೆ ಆಕ್ಷನ್ ಕಟ್ ಹೇಳಿದ್ದಾರೆ.  ಮನೋರಂಜನೆಯೇ ಪ್ರಧಾನವಾಗಿರುವ  “GST” ಚಿತ್ರಕ್ಕೆ “ಘೋಸ್ಟ್ ಇನ್ ಟ್ರಬಲ್” ಎಂಬ ಅಡಿಬರಹವಿದೆ.

ಸೃಜನ್ ಲೋಕೇಶ್ ಅವರಿಗೆ ನಾಯಕಿಯಾಗಿ ರಜನಿ ಭಾರದ್ವಾಜ್ ನಟಿಸಿದ್ದಾರೆ.  ಪ್ರಮೋದ್ ಶೆಟ್ಟಿ, ಗಿರಿಜಾ ಲೋಕೇಶ್, ಶೋಭ್ ರಾಜ್, ಶರತ್ ಲೋಹಿತಾಶ್ವ, ನಿವೇದಿತಾ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ, ಮಾಸ್ಟರ್ ಸುಕೃತ್ ಮುಂತಾದವರು ಈ ಸಿನಿಮಾದ ತಾರಾಬಳಗದಲ್ಲಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಹಾಗೂ  ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ     ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ತೇಜಸ್ವಿ ಕೆ ನಾಗ್ ಈ ಚಿತ್ರದ ಸಹ ನಿರ್ದೇಶಕರು.

GST GST Kannada Movie GST Movie Release Date Sandalwood Srujan Lokesh Srujan Lokesh Movie ಜಿಎಸ್‌ಟಿ ಕನ್ನಡ ಸಿನಿಮಾ ಜಿಎಸ್‌ಟಿ ಸಿನಿಮಾ ಬಿಡುಗಡೆ ದಿನಾಂಕ ಸೃಜನ್‌ ಲೋಕೇಶ್‌
Share. Facebook Twitter Pinterest LinkedIn Tumblr Email
Jagali Katte
  • Website

Related Posts

ಗಿಲ್ಲಿ ನಾಯಕನಾಗಿ ನಟಿಸಿರುವ `ಸೂಪರ್ ಹಿಟ್’ ಚಿತ್ರ ಫೆಬ್ರವರಿ 27ರಂದು ತೆರೆಗೆ!

February 10, 2026

ವೀರ ಕಂಬಳ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ!

February 10, 2026

Landlord Review: ದುನಿಯಾ ವಿಜಯ್-‌ ರಾಜ್‌ ಬಿ ಶೆಟ್ಟಿಯ ʻಲ್ಯಾಂಡ್‌ ಲಾರ್ಡ್‌ʼ ಸಿನಿಮಾ ಹೇಗಿದೆ?

January 23, 2026

‘ಕರಾವಳಿ’ಯಿಂದ ಬಂತು ಫಸ್ಟ್ ರೊಮ್ಯಾಂಟಿಕ್ ಮುದ್ದು ಗುಮ್ಮ

January 23, 2026
Add A Comment
Leave A Reply Cancel Reply

Editors Picks
Latest Posts

Subscribe to Updates

Get the latest sports news from SportsSite about soccer, football and tennis.

© 2026 Jagali Katte. Designed by Karnataka Best Digital Services.
  • ಮುಖಪುಟ
  • ಸಿನಿಮಾ
  • ಕಿರುತೆರೆ
  • ಚಿತ್ರವಿಮರ್ಶೆ
  • ಏನ್ ಸುದ್ದಿ
  • ವಿಶೇಷ

Type above and press Enter to search. Press Esc to cancel.